ಕಲಬುರಗಿ: ಮಹಿಳೆಯರೇ ಬಸ್ ಹತ್ತುವಾಗ ಎಚ್ಚರ: ನಗರದಲ್ಲಿ ಮಹಿಳೆ ಬ್ಯಾಗ್ನಿಂದ ₹3.85 ಲಕ್ಷ ಮೌಲ್ಯದ ಚಿನ್ನ,ನಗದು ಹಣ ಕಳ್ಳತನ
ಕಲಬುರಗಿ : ಕಲಬುರಗಿ ನಗರದ ನೆಹರು ಗಂಜ್ ಬಳಿ ಚಿಂಚೋಳಿ ಬಸ್ ಹತ್ತುತ್ತಿದ್ದ ಮಹಿಳೆಯ ವ್ಯಾನಿಟಿ ಬ್ಯಾಗ್ನಿಂದ ನಗದು, ಚಿನ್ನ ಸಹಿತ ₹3.85 ಲಕ್ಷ ಮೌಲ್ಯದ ವಸ್ತುಗಳನ್ನ ದೋಚಿಕೊಂಡು ಹೋದ ಘಟನೆ ನಡೆದಿದ್ದು, ಅ19 ರಂದು ರಾತ್ರಿ 7 ಗಂಟೆಗೆ ಮಾಹಿತಿ ಲಭ್ಯವಾಗಿದೆ.. ಜ್ಯೋತಿಬಾಯಿ ಚೌವ್ಹಾಣ್ ಎಂಬುವರು ಗಂಜ್ ಬಸ್ಟ್ಯಾಂಡ್ನಿಂದ ಚಿಂಚೋಳಿ ಬಸ್ ಹತ್ತು ವೇಳೆ ವ್ಯಾನಿಟಿ ಬ್ಯಾಗ್ನಿಂದ ಚಿನ್ನ ನಗದು ಹಣ ಸಹಿತ ₹3.85 ಲಕ್ಷ ಮೌಲ್ಯದ ವಸ್ತುಗಳನ್ನ ದೋಚಿದ್ದಾರೆ. ಈ ಬಗ್ಗೆ ಚೌಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ