ಮಾನ್ವಿ: ಬಾಗಲವಾಡ ಗ್ರಾಮದಲ್ಲಿ ಭತ್ತದ ಸಸಿಗಳ ತುಂಬಿಕೊಂಡು ಹೋಗುತ್ತಿದ್ದ ಟ್ರ್ಯಾಕ್ಟರ್ ಪಲ್ಟಿ
Manvi, Raichur | Sep 24, 2025 ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಬಾಗಲವಾಡ ಗ್ರಾಮದಲ್ಲಿ ರಸ್ತೆ ಹಾಳಾಗಿದ್ದರಿಂದ ಭತ್ತದ ಸಸಿಗಳ ತುಂಬಿಕೊಂಡು ಹೊರಟಿದ್ದ ಟ್ರಾಕ್ಟರ್ ಒಂದು ಪಲ್ಟಿಯಾಗಿ ಸಸಿಗಳೆಲ್ಲ ಹಾಳಾಗಿರುವ ಘಟನೆ ಬುಧವಾರ ಬೆಳಗ್ಗೆ ನಡೆದಿದೆ. ಕವಿತಾಳ ಮಾನ್ವಿ ಮುಖ್ಯ ರಸ್ತೆ ಸಂಪೂರ್ಣ ಹಾಳಾಗಿ ಕೆಸರು ಗದ್ದೆಯಂತಾಗಿದ್ದು ನಿರಂತರ ಸುರಿದ ಮಳೆಯಿಂದಾಗಿ ರಸ್ತೆಗಳು ಹಾಳಾಗಿವೆ ಅಲ್ಲದೆ ಜಲಜೀವನ ಮಿಷನ್ ಕಾಮಗಾರಿಗಾಗಿ ರಸ್ತೆಗಳು ಅಗೆದ ಕಾರಣ ವಾಹನಗಳ ಓಡಾಟಕ್ಕೆ ತೊಂದರೆಯಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.