ಬೆಳಗಾವಿ: ಬೆಳಗಾವಿ ನಗರದಲ್ಲಿ ನೀರಿಗಾಗಿ ಆಗ್ರಹಿಸಿ ಹಾಸ್ಟೆಲ್ ವಿದ್ಯಾರ್ಥಿನಿಯರಿಂದ ಪ್ರತಿಭಟನೆ
ಬೆಳಗಾವಿ ನಗರದ ಹಿಂದುಳಿದ ಕಲ್ಯಾಣ ಇಲಾಖೆ ವ್ಯಾಪ್ತಿಗೆ ಬರೋ ದೀನದಯಾಳ್ ಉಪಾಧ್ಯಾಯ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯದಲ್ಲಿ ಮಂಗಳವಾರ ರಾತ್ರಿ 10 ಗಂಟೆಗರ ವಿದ್ಯಾರ್ಥಿನಿಯರು ಪ್ರತಿಭಟನೆ ನಡೆಸಿದ್ದು ಕಳೆದ ಹದಿನೈದು ದಿನಗಳಿಂದ ಹಾಸ್ಟೆಲ್ ನಲ್ಲಿ ಸರಿಯಾಗಿ ನೀರು ಬರ್ತಿಲ್ಲ ಮಧ್ಯಾಹ್ನದಿಂದಲೂ ನೀರು ಬರದೇ ಕಂಗಾಲಾದ ವಿದ್ಯಾರ್ಥಿನಿಯರು ವಾಸರೂಮ್ ಗೆ ನೀರಿಲ್ಲದೇ ವಿದ್ಯಾರ್ಥಿನಿಯರ ಪರದಾಟ ನಡೆಸಿದ್ದು ಮೆನು ಪ್ರಕಾರ ಊಟ ಕೊಡೊದಿಲ್ಲ ಎಂದು ವಿದ್ಯಾರ್ಥಿನಿಯರ ಆಕ್ರೋಶ ವ್ಯಕ್ತಪಡಿಸಿದ್ದಾರೆ ವಾರಗಂಟಲೇ ಟೊಮ್ಯಾಟೊ ಸಾಂಬಾರ ಕೊಡ್ತಾರೆ ವಾರ್ಡನ ಸರಿಯಾಗಿ ಬಾಳೆಹಣ್ಣು ಕೊಡೋದಿಲ್ಲ ಹೊಟ್ಟೆ ತುಂಬ ಊಟವೂ ಇಲ್ಲ ಎಂದು ಆಕ್ರೋಶ ಕೊಡುವ ಊಟದಲ್ಲಿ ನುಸಿಗಳು ಬರ್ತಿವೆ ಮೂಲಭೂತ ಸೌಕರ್ಯಗಳ ಕೊಡುವಂತೆ ಆಗ್ರಹಿಸಿದರು.