ಸವದತ್ತಿ: ಸವದತ್ತಿ ಪಟ್ಟಣದಲ್ಲಿ ಕಂಡಕ್ಟರ್ ಆಗಿದ್ದ ಮಹಿಳೆ ಶವವಾಗಿ ಪತ್ತೆ
ಬೆಳಗಾವಿ ಜಿಲ್ಲೆಯ ಸವದತ್ತಿ ಪಟ್ಟಣದ ರಾಮಪುರ ಸೈಟ್ ಎನ್ನುವಲ್ಲಿನ ಮನೆಯೊಂದರಲ್ಲಿ ಮಹಿಳೆ ಶವವೊಂದು ಪತ್ತೆಯಾಗಿದ್ದು ಎರಡ್ಮೂರ ದಿನಗಳಿಂದ ಮನೆಯಲ್ಲಿದ್ದ ಶವವೊಂದು ಪತ್ತೆಯಾಗಿದ್ದು ಮನೆಯಲ್ಲಿ ವಾಸನೆ ಬರುತ್ತಿದ್ದಂತೆ ಸ್ಥಳೀಯರು ಹೋಗಿ ನೋಡಿದಾಗ ಮಹಿಳೆ ಸಾವನ್ನಪ್ಪಿದ್ದು ತಿಳಿದು ಬಂದಿದ್ದು ಸ್ಥಳಕ್ಕೆ ದೌಡಾಯಿಸಿ ಪೊಲೀಸರು ನೋಡಿದಾಗ ಕೊಲೆಯಾದ ರೀತಿಯಲ್ಲಿ ಶವ ಪತ್ತೆಯಾಗಿದ್ದು ಪೊಲೀಸರು ಮೃತದೇಹವನ್ನ ಮರಣೋತ್ತರ ಪರೀಕ್ಷೆಗಾಗಿ ಇಂದು ಶುಕ್ರವಾರ 4 ಗಂಟೆಗೆ ಬೆಳಗಾವಿ ಬಿಮ್ಸ್ ಆಸ್ಪತ್ರೆಗೆ ರವಾನೆ ಮಾಡಿದ್ದು ಪೊಲೀಸ್ ತನಿಖೆ ಮೂಲಕ ಹೆಚ್ಚಿನ ಮಾಹಿತಿ ಬರಬೇಕಿದೆ ಸವದತ್ತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ ಆಗಿದ್ದು ಪ್ರಕರಣ ಕೂಡಾ ದಾಖಲಾಗಿದೆ.