ಆಳಂದ: ಕೆರೆ ಕೋಡಿ ಒಡೆದು ಮಾಡ್ಯಾಳ್ ಗ್ರಾಮಕ್ಕೆ ನುಗ್ಗಿದ ನೀರು: ಮನೆಗಳಿಗೆ ನೀರು ನುಗ್ಗಿ ಅವಾಂತರ
ಕಲಬುರಗಿ : 50 ವರ್ಷಗಳ ಹಿಂದೆ ನಿರ್ಮಿಸಿದ್ದ ಕೆರೆಯ ಕೊಡಿ ಒಡೆದು ಇಡೀ ಗ್ರಾಮಕ್ಕೆ ಗ್ರಾಮವೇ ಜಲಾವೃತವಾದ ಘಟನೆ ಕಲಬುರಗಿ ಜಿಲ್ಲೆ ಆಳಂದ ತಾಲೂಕಿನ ಮಾಡ್ಯಾಳ ಗ್ರಾಮದಲ್ಲಿ ನಡೆದಿದ್ದು, ಸೆ20 ರಂದು ರಾತ್ರಿ 7 ಗಂಟೆಗೆ ಗ್ರಾಮಸ್ಥರು ಮಾಹಿತಿ ನೀಡಿದ್ದಾರೆ.. ಊರಾಚೆಯಿರೋ ಕೆರೆಯ ಕೊಡಿ ಒಡೆದು ರಭಸವಾಗಿ ಗ್ರಾಮಕ್ಕೆ ನುಗ್ಗಿ ಇಡೀ ಗ್ರಾಮವೇ ಜಲಾವೃತವಾಗಿದೆ.. ಅಷ್ಟೇ ಅಲ್ಲದೇ ಗ್ರಾಮದ ಬಹುತೇಕ ಮನೆಗಳಿಗೆ ನೀರು ನುಗ್ಗಿ ದವಸಧಾನ್ಯಗಳು ಸೇರಿದಂತೆ ಅನೇಕ ವಸ್ತುಗಳು ನೀರು ಪಾಲಾಗಿವೆ. ಮನೆಯಲ್ಲಿನ ನೀರು ಹೊರಹಾಕಲು ಜನ ಹೈರಾಣಾಗಿದ್ದಾರೆ