ಗುಂಡ್ಲುಪೇಟೆ: ಬಂಡೀಪುರ ಅರಣ್ಯಕ್ಕೆ ಖಾಸಗಿ ಜೀಪ್ ಪ್ರವೇಶ- ಪರಿಸರವಾದಿಗಳ ಆಕ್ಷೇಪ
ಜನಪ್ರಿಯ ಹುಲಿ ರಕ್ಷಿತಾರಣ್ಯಗಳಲ್ಲಿ ಒಂದಾದ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಅರಣ್ಯಕ್ಕೆ ಖಾಸಗಿ ಜೀಪ್ ಪ್ರವೇಶಿಸಿದ್ದು ಪರಿಸರವಾದಿಗಳು ಆಕ್ಷೇಪ ಹೊರಹಾಕಿದ್ದಾರೆ. ಬಂಡಿಪುರದ ಹಳೇ ಸಫಾರಿ ಕ್ಯಾಂಪಸ್ ಎದುರಿನ ತಾವರೆಕಟ್ಟೆ ಕೆರೆ ರಸ್ತೆಯಲ್ಲಿ ಶನಿವಾರ ಸಂಜೆ ಆಂಧ್ರಪ್ರದೇಶ ನೋಂದಣಿಯ ಮತ್ತು ಫಾರೆಸ್ಟ್ ಎಂದು ಸ್ಟಿಕ್ಕರ್ ಅಂಟಿಸಿಕೊಂಡಿರುವ ಖಾಸಗಿ ಜೀಪ್ ಅಕ್ರಮವಾಗಿ ಪ್ರವೇಶಿಸಿದ್ದು ವಾಹನ ಸವಾರರು ದೃಶ್ಯ ಸೆರೆ ಹಿಡಿದಿದ್ದಾರೆ. ಈ ಕುರಿತು ಪರಿಸರವಾದಿ ಜೋಸೆಫ್ ಹೂವರ್ ವೀಡಿಯೋ ಮತ್ತು ಫೋಟೋಗಳನ್ನು ಪೋಸ್ಟ್ ಮಾಡಿ ಅರಣ್ಯಾಧಿಕಾರಿಗಳ ವರ್ತನೆ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.