ಚಳ್ಳಕೆರೆ:ದೇವಸ್ಥಾನಕ್ಕೆ ಹೋಗಲು ಬೈಕ್ನಲ್ಲಿ ತೆರಳುತ್ತಿದ್ದ ದಂಪತಿಗೆ ಹಿಂಬದಿಯಿಂದ ಬಂದ ಕಾರು ಡಿಕ್ಕಿ ಹೊಡೆದ ಪರಿಣಾಮ, ಗಂಭೀರವಾಗಿ ಗಾಯಗೊಂಡಿದ್ದ ಮಹಿಳೆ ಮೃತಪಟ್ಟ ಘಟನೆ ತಾಲೂಕಿನ ಇಮಾಂಪುರ ಬಳಿ ನಡೆದಿದೆ. ಮೃತರನ್ನು ಎನ್. ಶಾಂತ ಎಂದು ಗುರುತಿಸಲಾಗಿದೆ. ಬೈಕ್ ಚಲಾಯಿಸುತ್ತಿದ್ದ ಅವರ ಪತಿ ಗಾಯಗೊಂಡಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬೈಕ್ನಲ್ಲಿ ಚಿತ್ರದುರ್ಗ ಕಡೆಯಿಂದ ಚಳ್ಳಕೆರೆಯ ಅಜ್ಜನಗುಡಿ ದೇವಸ್ಥಾನಕ್ಕೆ ದಂಪತಿ ಬರುತ್ತಿದ್ದರು. ಈ ವೇಳೆ ಚಿತ್ರದುರ್ಗ-ಚಳ್ಳಕೆರೆ ರಾಜ್ಯ ಹೆದ್ದಾರಿ-48ರ ಇಮಾಂಪುರ ಅರಣ್ಯ ಪ್ರದೇಶದ ಬಳಿ, ಹಿಂದಿನಿಂದ ಬಂದ ಕಾರು ಓವರ್ಟೇಕ್ ಮಾಡಲು ಹೋಗಿ ಘಟನೆ ನಡೆದಿದೆ.