ಕಡೂರು: ಬಯಲು ಸೀಮೆಯಲ್ಲಿ ಮಳೆ.! ರೈತರ ಮೊಗದಲ್ಲಿ ಕಳೆ.!
ಶಾಶ್ವತ ಬರಪೀಡಿತ ಪ್ರದೇಶದ ಎಂದು ಹಣೆ ಪಟ್ಟಿಯನ್ನು ಕಟ್ಟಿಕೊಂಡಿರುವ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಹೋಚಿಹಳ್ಳಿ ನಾಗರಾಳು ದೇವನೂರು ಭಾಗಗಳಲ್ಲಿ ಮಳೆ ಸುರಿದಿದ್ದು ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ಕಳೆದೊಂದು ತಿಂಗಳಿಂದ ಮಳೆ ಇಲ್ಲದೆ ರಾಗಿ ಸೇರಿದಂತೆ ಇನ್ನಿತರ ಬೆಳೆಗಳು ಒಣಗುತ್ತಿದ್ದು ಇದೀಗ ಬೆಳೆ ಉಳಿದುಕೊಳ್ಳುವ ಆಶಾಭಾವನೆ ರೈತರಲ್ಲಿ ಮೂಡಿದೆ.