ಕೊಳ್ಳೇಗಾಲ: ಮಧುವನಹಳ್ಳಿ-ನರೀಪುರ ಬೈಪಾಸ್‌ನಲ್ಲಿ ಬೈಕ್ ಡಿಕ್ಕಿ, ಯುವಕ ಸಾವು
ಕೊಳ್ಳೇಗಾಲ. ಮಧುವನಹಳ್ಳಿ - ನರೀಪುರ ಬೈಪಾಸ್ ಮದ್ಯದ ರಸ್ತೆಯಲ್ಲಿ ಗೂಡ್ಸ್ ವಾಹನಕ್ಕೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸಾವನ್ನಪ್ಪಿರುವ ಘಟನೆ ಜರುಗಿದೆ. ದೊಡ್ಡಿಂದುವಾಡಿ ಗ್ರಾಮದ ಹನುಮಂತ ಎನ್ನುವರ ಮಗ ತ್ರೀಮೂರ್ತಿ (29) ಎಂಬಾತ ಮೃತ್ತ ದುರ್ದೈವಿ. ಬೆಂಗಳೂರಿನ ಎಲೆಕ್ಟ್ರಿಸಿಯನ್ ಕೆಲಸ ಮಾಡಿತ್ತಿದ್ದನು. ಇಂದು ಬೆಳಿಗ್ಗೆ ಬೆಂಗಳೂರಿನಿಂದ ಗ್ರಾಮಕ್ಕೆ ಬಂದ ಅನಾರೋಗ್ಯದಲ್ಲಿರುವ ತನ್ನ ಅಣ್ಣನಿಗೆ ಚಾ.ನಗರದಲ್ಲಿ ರಕ್ತ ಕೊಟ್ಟು ಬಳಿಕ ದೊಡ್ಡಿಂದುವಾಡಿಗೆ ಬಂದು ಬಳಿಕ ಕೆಲಸಕ್ಕೆ ವಾಪಸ್ಸು ಬೆಂಗಳೂರಿಗೆ ಹೋಗುವಾಗ ಗೂಡ್ಸ್ ವಾಹನಕ್ಕೆ ಹಿಂಬದಿಯಿಂದ ಬೈಕ್ ಡಿಕ್ಕಿಯಾಗಿ ಸ್ಥಳದಲ್ಲೇ ಸವಾರ ಸಾವನ್ನಪ್ಪಿದ್ದಾನೆ. ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು, ಮುಂದಿನ ಕ್ರಮ ಕೈಗೊಂಡಿದ್ದಾರೆ.