ಚಾಮರಾಜನಗರ: ನರಸಮಂಗಲದಲ್ಲಿ ಚಿರತೆ ದಾಳಿ ಕರು ಬಲಿ, ಭಯಭೀತರಾದ ಗ್ರಾಮಸ್ಥರು
ಚಾಮರಾಜನಗರ ತಾಲೂಜಿನ ನರಸಮಂಗಲ ಗ್ರಾಮದಲ್ಲಿ ಚಿರತೆ ದಾಳಿ ನಡೆಸಿ ಕರುವನ್ನು ಕೊಂದು ಹಾಕಿರುವ ಘಟನೆ ಬುಧವಾರ ಬೆಳಗಿನ ಜಾವದಲ್ಲಿ ನಡೆದಿದೆ. ಗ್ರಾಮದ ನಾಗರಾಜಪ್ಪ ಎಂಬುವವರಿಗೆ ಸೇರಿದ ಕರು ಇದಾಗಿದ್ದು, ಕೊಟ್ಟಿಗೆಯಲ್ಲಿ ಕಟ್ಟಿಹಾಕಿದ್ದ ಕರುವನ್ನು ಸಮೀಪದ ಅರಿಶಿನ ಹೊಲಕ್ಕೆ ಹೊತ್ತೊಯ್ದು ಕೊಂದು ಹಾಕಿದೆ. ಚಿರತೆ ದಾಳಿಯಿಂದ ಗ್ರಾಮಸ್ಥರು ಹಾಗೂ ಜಮೀನಿಗೆ ಹೋಗುವ ರೈತರು ಭಯಭೀತರಾಗಿದ್ದಾರೆ. ವಿಚಾರ ತಿಳಿದು ಬಿ.ಆರ್.ಟಿ. ಸಾಮಾಜಿಕ ಅರಣ್ಯ ವಲಯದ ಅಧಿಕಾರಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.