ಔರಾದ್: ವಲಯ ಅರಣ್ಯ ಅಧಿಕಾರಿಗಳು ಕೇಂದ್ರ ಸ್ಥಳದಲ್ಲಿ ಇರುವಂತೆ ನೋಡಿಕೊಳ್ಳಲು ಡಿಎಸ್ಎಸ್ ಭೀಮ ಮಾರ್ಗ ತಾಲೂಕು ಘಟಕದಿಂದ ತಹಶೀಲ್ದಾರ್ ಗೆ ಮನವಿ
Aurad, Bidar | Nov 12, 2025 ವಲಯ ಅರಣ್ಯ ಅಧಿಕಾರಿಗಳು ಕೇಂದ್ರ ಸ್ಥಳದಲ್ಲಿ ಇರುವಂತೆ ನೋಡಿಕೊಳ್ಳಬೇಕು ಎಂದು ಒತ್ತಾಯಿಸಿ, ದಲಿತ ಸಂಘರ್ಷ ಸಮಿತಿ ಭೀಮ ಮಾರ್ಗ ತಾಲೂಕು ಘಟಕದ ವತಿಯಿಂದ ಬುಧವಾರ ಮಧ್ಯಾಹ್ನ 1:15ಕ್ಕೆ ತಹಶೀಲ್ದಾರ್ ಮಹೇಶ್ ಪಾಟೀಲ್ ಅವರಿಗೆ ಮನವಿ ಪತ್ರವನ್ನು ಸಲ್ಲಿಸಿದರು. ಈ ವೇಳೆ ಸಮಸ್ಯೆ ಕುರಿತು ಸಮಿತಿ ತಾಲೂಕು ಸಂಚಾಲಕ ತುಕಾರಾಂ, ಸನ್ಮುಖಿ ಮಾತನಾಡಿ ಜಿಂಕೆ ಮತ್ತು ತೋಳಗಳ ಹಾವಳಿ ಹೆಚ್ಚಾಗಿದ್ದು ಅದರಿಂದ ಬೆಳೆ ಹಾನಿ ಸಂಭವಿಸುತ್ತದೆ ಅಧಿಕಾರಿಗಳು ಕೇಂದ್ರ ಸ್ಥಳದಲ್ಲಿದ್ದು ಅರಣ್ಯ ಇಲಾಖೆ ಸಿಬ್ಬಂದಿಗಳು ಸೇವೆಯಲ್ಲಿ ತೊಡಗಿಸಿಕೊಂಡು ರೈತರ ನೆರವಿಗೆ ಧಾವಿಸುವಂತೆ ನೋಡಿಕೊಳ್ಳಬೇಕು ಎಂದು ಕೋರಿದರು.