ಹುಣಸಗಿ: ಮದಲಿಂಗನಾಳ ಗ್ರಾಮದಲ್ಲಿ ಮನೆಯ ಗೋಡೆ ಕುಸಿದು ನಾಲ್ಕು ಮೇಕೆಗಳು ಸಾವು
ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಮದಲಿಂಗನಾಳ ಗ್ರಾಮದಲ್ಲಿ ಮನೆಯ ಗೋಡೆ ಕುಸಿದು ನಾಲ್ಕು ಮೇಕೆಗಳು ಸಾವನ್ನಪ್ಪಿರುವ ಘಟನೆ ಶುಕ್ರವಾರ ಸಂಜೆ ನಡೆದಿದೆ. ಕಳೆದ ಮೂರು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಹಾ ಮಳೆಯಿಂದಾಗಿ ಮದಲಿಂಗನಾಳ ಗ್ರಾಮದ ಸಾಬಣ್ಣ ಬಿರಾದರ್ ಎನ್ನುವವರಿಗೆ ಸೇರಿದ ನಾಲ್ಕು ಮೇಕೆಗಳು ದೊಡ್ಡಿಯಲ್ಲಿ ಹಾಕಲಾಗಿತ್ತು ಪಕ್ಕದಲ್ಲಿಯೇ ಇದ್ದ ಹಳೆ ಮನೆಯ ಗೋಡೆ ಕುಸಿದು ಬಿದ್ದಿದ್ದರಿಂದ ನಾಲ್ಕು ಮೇಕೆಗಳು ಸಾವನಪ್ಪಿವೆ ಎಂದು ತಿಳಿದುಬಂದಿದ್ದು, ಸರ್ಕಾರ ಪರಿಹಾರ ನೀಡಬೇಕು ಎಂದು ಸರ್ಕಾರಕ್ಕೆ ವಿನಂತಿ ಮಾಡಿಕೊಂಡಿದ್ದಾರೆ.