ಕೊಳ್ಳೇಗಾಲ: ಚಿಲುಕವಾಡಿಯಲ್ಲಿ ದುರ್ಘಟನೆ: ಬೈಕ್ ಮತ್ತು ಟ್ರಾಕ್ಟರ್ ಡಿಕ್ಕಿ –ನಾಲ್ಕು ವರ್ಷದ ಮಗು ಸಾವು
ಕೊಳ್ಳೇಗಾಲ, ತಾಲೂಕಿನ ಚಿಲುಕವಾಡಿ ಸಮೀಪ ಬುಧವಾರಬೆಳ್ಳಿಗ್ಗೆ 6ರಲ್ಲಿ ನಡೆದ ರಸ್ತೆ ಅಪಘಾತದಲ್ಲಿ ನಾಲ್ಕು ವರ್ಷದ ಪುಟ್ಟ ಬಾಲಕಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಗುಂಡೇಗಾಲ ಗ್ರಾಮದ ನಿವಾಸಿಗಳಾದ ನಂಜುಂಡಸ್ವಾಮಿ ಮತ್ತು ಅವರ ಪತ್ನಿ ಕಾವ್ಯ ಮೈಸೂರಿಗೆ ಕಾರ್ಯನಿಮಿತ್ತ ಬೈಕ್ ನಲ್ಲಿ ಹೋಗುತ್ತಿದ್ದಾಗ, ಚಿಲುಕವಾಡಿ ಬಳಿ ನಿಂತಿದ್ದ ಟ್ರಾಕ್ಟರ್ ಹಿಂಭಾಗಕ್ಕೆ ಡಿಕ್ಕಿ ಹೊಡೆದಿದ್ದಾರೆ. ಈ ಅಪಘಾತದಲ್ಲಿ ಅವರ ನಾಲ್ಕು ವರ್ಷದ ಮಗಳು ಹರ್ಷಿತಾ ತೀವ್ರ ಗಾಯಗೊಂಡಿದ್ದಳು ತಕ್ಷಣ ಆಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಕೊಂಡೊಯ್ಯುತ್ತಿರುವಾಗ ಮಾರ್ಗಮಧ್ಯೆ ಮಗು ಸಾವನ್ನಪ್ಪಿದಾಳೆಅಪಘಾತದಲ್ಲಿ ತಂದೆ-ತಾಯಿ ಸಣ್ಣ ಪುಟ್ಟ ಪೆಟ್ಟುಗಳೊಂದಿಗೆ ಪಾರಾಗಿದ್ದು ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿಮುಂದಿನ ಕ್ರಮ ಕೈಗೊಂಡಿದ್ದಾರೆ