ಗುಂಡ್ಲುಪೇಟೆ: ಹಂಗಳ ಸಮೀಪ ಅಪಘಾತ ಕೇಸ್- ಸ್ಥಳೀಯರಿಂದ ಕಾರಿನಲ್ಲಿದ್ದವರಿಗೆ ಗೂಸಾ
ಥವೆರಾ ಕಾರು ಹಾಗೂ ಬೈಕ್ ಮುಖಾಮುಖಿ ಡಿಕ್ಕಿಯಾಗಿ ಸವಾರ ಸ್ಥಳದಲ್ಲೇ ಅಸುನೀಗಿದ ಘಟನೆ ಗುಂಡ್ಲುಪೇಟೆ ತಾಲೂಕಿನ ಹಂಗಳ ಸಮೀಪ ಭಾನುವಾರ ನಡೆದಿದೆ. ಹಂಗಳ ಗ್ರಾಮದ ಬೈಕ್ ಸವಾರ ಮನು ಸ್ಥಳದಲ್ಲಿ ಮೃತಪಟ್ಟ ದುರ್ದೈವಿ. ಬೊಮ್ಮಲಾಪುರದ ಗ್ರಾಮದ ಚಾಲಕ ಸೇರಿ ಮೂವರು ಕಾರಿನಲ್ಲಿ ತೆರಳುತ್ತಿದ್ದಾಗ ಬೈಕ್ ಗೆ ಮುಖಾಮುಖಿ ಡಿಕ್ಕಿ ಹೊಡೆದಿದ್ದಾರೆ. ಕಾರಿನ ಚಾಲಕ ಸೇರಿ ಮೂವರು ಕೂಡ ಮದ್ಯ ಸೇವಿಸಿ ವಾಹನ ಚಾಲನೆ ಮಾಡುತ್ತಿದ್ದಾರೆಂದು ಸ್ಥಳೀಯರು ಕಾರಿನಲ್ಲಿದ್ದವರ ವಿರುದ್ಧ ಕುಪಿತಗೊಂಡು ಧರ್ಮದೇಟು ನೀಡಿದ್ದಾರೆ. ಮದ್ಯ ಸೇವಿಸಿ ಕಾರು ಚಲಾಯಿಸುತ್ತಿದ್ದರಿಂದ ಅವಘಡ ಉಂಟಾಗಿದೆ ಎಂದು ಸಾರ್ವಜನಿಕರಿಂದ ಕಾರಿನಲ್ಲಿದ್ದ ಇಬ್ಬರ ಮೇಲೆ ಮನಬಂದಂತೆ ಗೂಸಾ ಕೊಟ್ಟಿದ್ದಾರೆ.