ಮಳವಳ್ಳಿ: ತಾಲ್ಲೂಕಿನ ಬಂಡೂರು ಗ್ರಾಮದ ಶಾಲಾ ಆವರಣದಲ್ಲಿ ಬಿಇಎಂಎಲ್ ವತಿಯಿಂದ ಜಾಗೃತಿ ಸಪ್ತಾಹ ಅಂಗವಾಗಿ ಗ್ರಾಮ ಸಭೆ
ಮಳವಳ್ಳಿ : ಭ್ರಷ್ಟಾಚಾರದ ವಿರುದ್ಧ ಶಾಲಾ ಮಕ್ಕಳಲ್ಲಿ ಜಾಗೃತಿ ಮೂಡಿ ಸುವ ಗ್ರಾಮ ಸಭೆಯೊಂದು ಮಳವಳ್ಳಿ ತಾಲ್ಲೂಕಿನ ಬಂಡೂರು ಗ್ರಾಮದಲ್ಲಿ ಏರ್ಪಾಡಾಗಿತ್ತು. ಜಾಗೃತಿ ಅರಿವು ಸಪ್ತಾಹದ ಅಂಗ ವಾಗಿ ಬಂಡೂರು ಶಾಲಾ ಆವರಣದಲ್ಲಿ ಮಂಗಳವಾರ ಮಧ್ಯಾಹ್ನ 2.30 ರ ಸಮಯದಲ್ಲಿ ಬಿಇಎಂಎಲ್ ಸಂಸ್ಥೆ ಆಯೋಜಿ ಸಿದ್ದ ಈ ಕಾರ್ಯಕ್ರಮವನ್ನು ಉದ್ಘಾಟಿಸಿದ ಟಿಎಪಿಸಿಎಂಎಸ್ ನಿರ್ಧೇಶಕರು ಬಂಡೂರು ಸಾರ್ವಜನಿಕ ಪ್ರೌಢಶಾಲಾ ಕಾರ್ಯದರ್ಶಿಗಳು ಆದ ಪುಟ್ಟಬಸ ವಯ್ಯ ಅವರು ಭ್ರಷ್ಟಾಚಾರ ದೇಶದೆಲ್ಲಡೆ ಸಾಂಕೇತಿಕ ರೋಗದಂತೆ ಹರಡುತ್ತಿದ್ದು ಇದು ದೇಶದ ಅಭಿವೃದ್ಧಿಗೆ ಮಾರಕವಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.