ಯಳಂದೂರು: ಧಾರಾಕಾರ ಮಳೆ ಹಿನ್ನೆಲೆ ಕೆಸ್ತೂರು ಗ್ರಾಮದ ಸರ್ಕಾರಿ ಶಾಲೆ ಆವರಣ ಜಲಾವೃತ
ಶುಕ್ರವಾರ ರಾತ್ರಿ ಸುರಿದ ಧಾರಾಕಾರ ಮಳೆಯಿಂದ ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲ್ಲೂಕಿನ ಕೆಸ್ತೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣ ಮಳೆ ನೀರಿನಿಂದ ಜಲಾವೃತಗೊಂಡಿದೆ. ಶಾಲಾ ಆವರಣ ಮಳೆ ನೀರಿನಿಂದ ನಿಂತ ಹಿನ್ನೆಲೆ ಶಾಲೆಯ ವಿದ್ಯಾರ್ಥಿಗಳು ಪರದಾಟ ಪಟ್ಟರು. ಇನ್ನೂ ಪ್ರತಿಭಾರಿಯು ಮಳೆ ಬಂದರೆ ಶಾಲಾ ಆವರಣ ಮಳೆ ನೀರಿನಿಂದ ಜಲಾವೃತಗೊಳ್ಳುತ್ತದೆ. ಮಳೆ ನೀರು ಹೊರಗಡೆ ಹೋಗಲು ಜಾಗ ಇಲ್ಲದೇ ಜಲಾವೃತಗೊಳ್ಳುತ್ತಿದೆ.