ದಾಂಡೇಲಿ: ಕೇರವಾಡದ ಸತ್ಪುರುಷ ಶ್ರೀ ದಾಂಡೇಲಪ್ಪಾ ಸನ್ನಿಧಿಯಲ್ಲಿ ಸಂಪನ್ನಗೊಂಡ ಶ್ರೀ.ದುರ್ಗಾಮಾತಾ ದೌಡ್ ಕಾರ್ಯಕ್ರಮ
ದಾಂಡೇಲಿ : ನಗರದ ಶ್ರೀ. ಶಿವ ಪ್ರತಿಷ್ಠಾನ ಹಿಂದುಸ್ಥಾನ ಸಮಿತಿ ಇದರ ಆಶ್ರಯದಡಿ ಹಮ್ಮಿಕೊಂಡಿದ್ದ ಶ್ರೀ ದುರ್ಗಾ ಮಾತಾ ದೌಡ್ ಕಾರ್ಯಕ್ರಮವು ಇಂದು ಮಂಗಳವಾರ ಬೆಳಿಗ್ಗೆ ಎಂಟು ಗಂಟೆ ಸುಮಾರಿಗೆ ದಾಂಡೇಲಿಯ ಕೇರವಾಡದಲ್ಲಿರುವ ಸತ್ಪುರುಷ ಶ್ರೀ ದಾಂಡೇಲಪ್ಪಾ ಸನ್ನಿಧಿಯಲ್ಲಿ ಸಂಪನ್ನಗೊಂಡಿತು. ಎಂದು ಬೆಳಿಗ್ಗೆ ನಗರದ ಹಳಿಯಾಳ ರಸ್ತೆಯ ಶ್ರೀ ಹನುಮಾನ್ ದೇವಸ್ಥಾನದಿಂದ ಆರಂಭಗೊಂಡ ದುರ್ಗಾಮಾತಾ ದೌಡ್ ಮೆರವಣಿಗೆಯು ಅಪಾರ ಹಿಂದೂ ಧರ್ಮ ಬಾಂಧವರ ಭಾಗವಹಿಸುವಿಕೆಯೊಂದಿಗೆ ಸತ್ಪುರುಷ ಶ್ರೀ ದಾಂಡೇಲಪ್ಪ ಸನ್ನಿಧಿಗೆ ಆಗಮಿಸಿತು. ಶ್ರೀ ದಾಂಡೇಲಪ್ಪನ ಸನ್ನಿಧಿಯಲ್ಲಿ ವಿಶೇಷ ಪೂಜೆಯನ್ನು ಸಲ್ಲಿಸಿ, 9 ದಿನಗಳ ದುರ್ಗಾ ಮಾತಾ ದೌಡ್ ಕಾರ್ಯಕ್ರಮವನ್ನು ಸಂಪನ್ನಗೊಳಿಸಲಾಯಿತು.