ರಾಯಚೂರು: ಮಾರೆಮ್ಮ ಕ್ಯಾಂಪಿನಲ್ಲಿ ದೇವಿ ರಥೋತ್ಸವ ಅದ್ಧೂರಿ; ನಾರಿಯರು ಎಳೆದರು ತೇರು; ವಿಡಿಯೋ ನೋಡಿ
ತಾಲೂಕಿನ ಮಾರೆಮ್ಮ ಕ್ಯಾಂಪಿನಲ್ಲಿ ನವರಾತ್ರಿಯ ಅಂಗವಾಗಿ ಕೊನೆಯ ದಿವಸ ಶ್ರೀ ಮಾರೆಮ್ಮ ದೇವಿ ಜಾತ್ರಾ ಮಹೀತ್ಸವ ಸಡಗರ ಸಂಭ್ರಮದಿಂದ ಜರುಗಿತು. ಜಾತ್ರೆಯ ಅಂಗವಾಗಿ ಭವ್ಯವಾದ ರಥೋತ್ಸವ ಜರುಗಿತು. ಮಹಿಳೆಯರು, ಪುರುಷರು ಎಲ್ಲರೂ ಸೇರಿ ರಥ ಎಳೆದು ದೇವಿ ಕೃಪೆಗೆ ಪಾತ್ರರಾದರು. ಒಂಭತ್ತು ದಿನಗಳ ಕಾಲ ನಡೆದ ಪುರಾಣ ಪ್ರವಚನಕ್ಕೆ ಮಹಾಮಂಗಲ ನೆರವೇರಿಸಲಾಯಿತು. ಭಕ್ತರು ದೇವಿ ಸನ್ನಿಧಿಗೆ ಭೇಟಿ ನೀಡಿ ಕಾಯಿ ಕರ್ಪೂರ, ನೈವೇದ್ಯ ಅರ್ಪಿಸಿ ಪುರಾಣ ಮಂಗಲೋತ್ಸವದಲ್ಲಿ ಪಾಲ್ಗೊಂಡರು. ನಂತರ ಕೊನೆಯ ದಿನದ ಧಾರ್ಮಿಕ ಕಾರ್ಯಗಳಲ್ಲಿ ಪಾಲ್ಗೊಂಡು ನಂತರ ಸಂಜೆ ಆರುವರೆಗೆ ರಥೋತ್ಸವದಲ್ಲಿ ಪಾಲ್ಗೊಂಡು ಭಕ್ತಿ ಸಮರ್ಪಿಸಿದರು.