ಸಿರವಾರ: ಮಲ್ಲಟ ಗ್ರಾಮದಲ್ಲಿ ಶವ ಸಂಸ್ಕಾರಕ್ಕೆ ಜನರ ಪರದಾಟ
Sirwar, Raichur | Oct 29, 2025 ರಾಯಚೂರು ಜಿಲ್ಲೆಯ ಸಿರವಾರ ತಾಲೂಕಿನ ಮಲ್ಲಾಟ ಗ್ರಾಮದಲ್ಲಿ ದಲಿತ ಸಮುದಾಯಕ್ಕೆ ಶವಸಂಸ್ಕಾರ ಮಾಡಲು ಸ್ಥಳ ಇಲ್ಲದ ಕಾರಣ, ಕಿಲೋಮೀಟರ್ ಗಟ್ಟಲೆ ಹಳ್ಳದಲ್ಲಿ ಜಿವದ ಹಂಗು ತೊರೆದು ಶವವನ್ನು ಹೆಗಲ ಮೇಲೆ ಹೊತ್ತುಕೊಂಡು, ಶವ ಸಂಸ್ಕಾರ ಮಾಡಲು ಹೋಗುವ ಪರಿಸ್ಥಿತಿ ಉಂಟಾಗಿದೆ. ಈ ವೇಳೆ ಶವಸಂಸ್ಕಾರಕ್ಕೆ ತೆರಳಿದ ವ್ಯಕ್ತಿ ಓರ್ವ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ನಮ್ಮ ಕಷ್ಟ ನಿಮಗೆ ಅರ್ಥ ಆಗುವುದಿಲ್ಲ ಎಂದು ಈ ಮಾರಿ ಹಾಕಿದ್ದಾನೆ.