ಕಾರವಾರ: ನಗರದ ಬಸ್ ನಿಲ್ದಾಣದ ಎದುರಿನ ಬಾಲಾಜಿ ಸ್ಟೋರ್ಸ್ನಲ್ಲಿ ಮೊಬೈಲ್ ಕಳ್ಳತನ; ಸಿಸಿ ಕ್ಯಾಮೆರಾ ಸೆರೆ
ನಗರದ ಬಸ್ ನಿಲ್ದಾಣ ಬಿಲ್ಡಿಂಗ್ ದ ಎದುರಿಗಿರುವ ಬಾಲಾಜಿ ಸ್ಟೋರ್ಸ್ನಲ್ಲಿ ಮೊಬೈಲ್ ಕಳ್ಳತನವಾಗಿರುವ ಘಟನೆ ನಡೆದಿದೆ. ಕಳ್ಳತನದ ಸಂಪೂರ್ಣ ದೃಶ್ಯಾವಳಿ ಅಂಗಡಿಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ಬಗ್ಗೆ ಮಂಗಳವಾರ ಬೆಳಗ್ಗೆ 10 ಕ್ಕೆ ಈ ಬಗ್ಗೆ ಮಾಧ್ಯಮಕ್ಕೆ ಮಾಹಿತಿ ಲಭ್ಯವಾಗಿದೆ. ಕಳ್ಳನೊಬ್ಬ ಗ್ರಾಹಕನ ಸೋಗಿನಲ್ಲಿ ಅಂಗಡಿಗೆ ಬಂದಿದ್ದು, ಸಂದರ್ಭ ಬಳಸಿಕೊಂಡು ಮೊಬೈಲ್ ಅನ್ನು ಕದ್ದು ಪರಾರಿಯಾಗಿದ್ದಾನೆ. ಈ ಘಟನೆಯ ವಿಡಿಯೋ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಆರೋಪಿಯ ಗುರುತು ಪತ್ತೆಗಾಗಿ ಪೊಲೀಸರು ಸಾರ್ವಜನಿಕರ ಸಹಾಯ ಕೋರಿದ್ದು ಕಳ್ಳನ ಬಗ್ಗೆ ಮಾಹಿತಿ ಸಿಕ್ಕಲ್ಲಿ ಕೂಡಲೇ ಬಾಲಾಜಿ ಸ್ಟೋರ್ಸ್ ಅಥವಾ ಹತ್ತಿರದ ಪೊಲೀಸ್ ಠಾಣೆಗೆ ಸಂಪರ್ಕಿಸುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.