ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಯಲ್ಲಿನ ಅಸಮತೋಲನವನ್ನು ನಿವಾರಿಸಿ, ಹಿಂದುಳಿದ ಗ್ರಾಮ ಪಂಚಾಯಿತಿಗಳಿಗೆ ಹೊಸ ಚೈತನ್ಯ ನೀಡಲು ರಾಜ್ಯ ಸರ್ಕಾರವು “ಕಾಯಕ ಗ್ರಾಮ ಯೋಜನೆ” ಎಂಬ ಯೋಜನೆ ಜಾರಿಗೆ ತಂದಿದ್ದು ಗ್ರಾಮಗಳ ಸಮಗ್ರ ಅಭಿವೃದ್ಧಿಗೆ ಸಹಕರಿಸುವಂತೆ ಜಿಪಂ ಸಿಇಒ ಡಾ.ಆಕಾಶ್ ಹೇಳಿದರು. ತಾಲೂಕಿನ ಬೇಡರೆಡ್ಡಿಹಳ್ಳಿ ಗ್ರಾಮಪಂಚಾಯಿತಿ ಸಭಾಂಗಣದಲ್ಲಿ ಕಾಯಕ ದತ್ತು ಗ್ರಾಮ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಈ ಯೋಜನೆಯು ಹಿಂದುಳಿದ ಗ್ರಾಮಗಳನ್ನು ಅಧಿಕಾರಿಗಳೇ ದತ್ತು ಪಡೆದು, ಅವುಗಳ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುವ ಒಂದು ವಿನೂತನ ಮಾದರಿಯಾಗಿದೆ. ಈ ಯೋಜನೆಯಲ್ಲಿ ಶಿಕ್ಷಣ. ಆರೋಗ್ಯ.ಕುಡಿಯುವ ನೀರು