ಹಿರಿಯೂರು: ಹಿರಿಯೂರು ವ್ಯಾಪ್ತಿಯಲ್ಲಿ ನಾಳೆ ವಿಧ್ಯುತ್ ವ್ಯತ್ಯಯ, ನಗರದಲ್ಲಿ ಬೆಸ್ಕಾಂ ಪ್ರಕಟಣೆ
ಹಿರಿಯೂರು ವ್ಯಾಪ್ತಿಯಲ್ಲಿ ನಾಳೆ ವಿಧ್ಯುತ್ ವ್ಯತ್ಯಯ ಉಂಟಾಗಲಿದ್ದಾಗಿ ಬೆಸ್ಕಾಂ ಪ್ರಕಟಣೆ ನೀಡಿದೆ. ಸೋಮವಾರ ಸಂಜೆ 5 ಗಂಟೆಗೆ ಬೆಸ್ಕಾಂ ಪ್ರಕಟಣೆ ನೀಡಿದೆ. ಹಿರಿಯೂರು ತಾಲ್ಲೂಕು ವ್ಯಾಪ್ತಿಯಲ್ಲಿ ಇದೇ ನ.18ರಂದು ಬೆಳಿಗ್ಗೆ 10 ರಿಂದ ಸಂಜೆ 5 ರವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.66/11 ಕೆವಿ ಹಿರಿಯೂರು, ಭರಂಗಿರಿ ಮತ್ತು ಐಮಂಗಲ ವಿ.ವಿ ಕೇಂದ್ರಗಳಲ್ಲಿ 3ನೇ ತ್ರೈಮಾಸಿಕ ನಿರ್ವಹಣಾ ಕಾಮಗಾರಿ ಇರುವ ಪ್ರಯುಕ್ತ ವಿದ್ಯುತ್ ವ್ಯತ್ಯಯವಾಗಲಿದೆ.