ಚಿಂತಾಮಣಿ: ಚಿಂತಾಮಣಿನಗರದಲ್ಲಿ ಶಿಕ್ಷಕರ ದಿನಾಚರಣೆ ಆಚರಣೆ
ಎಲ್ಲಾ ವೃತ್ತಿಗಳಲ್ಲಿಯೂ ಶ್ರೇಷ್ಟವಾದದ್ದು ಶಿಕ್ಷಕ ವೃತ್ತಿಯಾಗಿದ್ದು, ಸಮಾಜದಲ್ಲಿ ಗೌರವಯುತವಾಗಿ ಶಿಕ್ಷಕರು ಜೀವನ ನಡೆಸಬೇಕಾದರೆ ತಮ್ಮ ವೃತ್ತಿಗೆ ಯಾವುದೇ ರೀತಿಯಾಗಿ ಚ್ಯುತಿಬಾರದ ಹಾಗೇ ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡಿ ಆ ಮಕ್ಕಳನ್ನು ಸಮಾಜದಲ್ಲಿ ಉತ್ತಮ ಪ್ರಜೆಗಳನ್ನಾಗಿ ಮಾಡಬೇಕೆಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ ಸುಧಾಕರ್ ರವರು ವಿದ್ಯಾರ್ಥಿಗಳಿಗೆ ಕರೆ ನೀಡಿದರು.ತಾಲ್ಲೂಕು ಆಡಳಿತ, ತಾಲ್ಲೂಕು ಪಂಚಾಯತಿ ಹಾಗೂ ಶಾಲಾ ಶಿಕ್ಷಣ ಇಲಾಖಾ ಸಂಯುಕ್ತಾಶ್ರಯದಲ್ಲಿ ಚಿಂತಾಮಣಿ ನಗರದ ಎಂ.ಸಿ ಆಂಜನೇಯರೆಡ್ದಿ ಕಲ್ಯಾಣ ಮಂಟಪದಲ್ಲಿ ಭಾರತರತ್ನ ಡಾ ಎಸ್ ರಾಧಾಕೃಷ್ಣನ್ ರವರ ಜನ್ಮದಿನೋತ್ಸವ ಹಾಗೂ ತಾಲ್ಲೂಕು ಮಟ್ಟದ ಶಿಕ್ಷಕರ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿತ್ತು.