ದಾವಣಗೆರೆ: ನಗರದಲ್ಲಿ ಯತ್ನಾಳ್'ಗೆ ಜೆಸಿಬಿ, ಬೈಜ್ ರ್ಯಾಲಿ ಮೂಲಕ ಅದ್ದೂರಿ ಸ್ವಾಗತ: ಜೆಸಿಬಿ... ಜೆಸಿಬಿ ಎಂದು ಕೂಗಿದ ಅಭಿಮಾನಿಗಳು
ನಗರದಲ್ಲಿ ಯತ್ನಾಳ್'ಗೆ ಜೆಸಿಬಿ, ಬೈಜ್ ರ್ಯಾಲಿ ಮೂಲಕ ಅದ್ದೂರಿ ಸ್ವಾಗತ: ಜೆಸಿಬಿ... ಜೆಸಿಬಿ ಎಂದು ಕೂಗಿದ ಅಭಿಮಾನಿಗಳು ದಾವಣಗೆರೆ ನಗರದಲ್ಲಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಗೆ ಅಭಿಮಾನಿಗಳು ಅದ್ದೂರಿಯಾಗಿ ಸ್ವಾಗತ ಕೋರಿದರು. ದಾವಣಗೆರೆ ತಾಲ್ಲೂಕಿ ಮರಡಿ ಗ್ರಾಮದಲ್ಲಿದ್ದ ಗಣೇಶ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಲು ದಾವಣಗೆರೆ ನಗರಕ್ಕೆ ಆಗಮಿಸಿದ ಸಂದರ್ಭದಲ್ಲಿ ಯತ್ನಾಳ್ ಗೆ ಅಭಿಮಾನಿಗಳು ಜೈಕಾರ ಹಾಕಿ, ಹಿಂದೂ ಹುಲಿ.. ಜೆಸಿಬಿ ಜೆಸಿಬಿ ಎಂಬ ಘೋಷಣೆಯೊಂದಿಗೆ ಸ್ವಾಗತ ಕೋರಿದರು. ನಗರದ ಬಾಡಾ ಕ್ರಾಸ್ ಮೂಲಕ ಮರಡಿ ಗ್ರಾಮಕ್ಕೆ ಹೋಗುವ ಸಂದರ್ಭದಲ್ಲಿ ಹಾರ, ತುರಾಯಿ ಹಾಕಿ ಅಭಿಮಾನಿಗಳು ಸ್ವಾಗತ ಕೋರಿದರು. ಈ ಸಂದರ್ಭದಲ್ಲಿ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಇದ್ದರು.