ಶೃಂಗೇರಿ: ಕೆಎಸ್ಆರ್ಟಿಸಿ ಬಸ್ ಅವ್ಯವಸ್ತೆ.! ಪಟ್ಟಣದಲ್ಲಿ ರಸ್ತೆ ತಡೆದು ವಿದ್ಯಾರ್ಥಿಗಳ ಆಕ್ರೋಶ.!
ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ಶಂಕರಾಚಾರ್ಯ ವೃತ್ತದಲ್ಲಿ ನೂರಾರು ವಿದ್ಯಾರ್ಥಿಗಳು ರಸ್ತೆ ತಡೆ ನಡೆಸಿ, ಸರಿಯಾದ ಸಮಯಕ್ಕೆ ಬಸ್ಗಳನ್ನು ಬಿಡುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು. ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನೇತೃತ್ವದಲ್ಲಿ ನಡೆದ ಈ ಪ್ರತಿಭಟನೆಗೆ ವಿದ್ಯಾರ್ಥಿಗಳು ಕೈಜೋಡಿಸಿದರು. ಗ್ರಾಮೀಣ ಪ್ರದೇಶದಲ್ಲಿ ಬಸ್ಗಳು ಸಮಯಕ್ಕೆ ಸಿಗದೆ ಕಾಲೇಜಿಗೆ ಹೋಗಲು ತೊಂದರೆ ಎದುರಾಗುತ್ತಿದೆ. ಕೆಲವರು ಕಾಲೇಜಿಗೆ ತಲುಪಲು ವಿಳಂಬವಾಗುತ್ತಿದ್ದು, ಇನ್ನೂ ಕೆಲವರು ಬಸ್ಗಳ ಅವ್ಯವಸ್ಥೆಯಿಂದಾಗಿ ವಿದ್ಯಾಭ್ಯಾಸವನ್ನು ಬಿಟ್ಟುಬಿಡಬೇಕಾದ ಅನಿವಾರ್ಯತೆಗೆ ಒಳಗಾಗುತ್ತಿದ್ದಾರೆ. ಈ ಕುರಿತು ವಿದ್ಯಾರ್ಥಿಗಳು ಹಲವು ಬಾರಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ಸಮಸ್ಯೆ ಪರಿಹಾರವಾಗದ ಕಾರಣ ಪ್ರತಿಭಟನೆ ನಡೆಸಿದರು.