ಹುಣಸಗಿ: ಗೆದ್ದಲಮರಿ ಗ್ರಾಮದ ಮುಂಭಾಗದ ಹಳ್ಳ ತುಂಬಿ ಹರಿಯುತ್ತಿದ್ದು,ರಸ್ತೆ ಸಂಚಾರ ಬಂದ್
ಕಳೆದ ಮೂರು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಹುಣಸಗಿ ತಾಲೂಕಿನ ಗೆದ್ದಲಮರಿ ಗ್ರಾಮದ ಮುಂಭಾಗದಲ್ಲಿರುವ ಹಳ್ಳ ಬಾರಿ ಪ್ರಮಾಣದಲ್ಲಿ ತೊಂದರೆ ಹರಿಯುತ್ತಿದ್ದು ಇದರಿಂದಾಗಿ ರಸ್ತೆ ಸಂಚಾರ ಬಂದ್ ಆಗಿದೆ. ಬೆಳಗ್ಗೆಯಿಂದ ಜನ ಬೇರೆ ಹೋಗಲು ಸಾಧ್ಯವಾಗದೆ ಪರದಾಡುತ್ತಿದ್ದಾರೆ. ರಸ್ತೆ ಮೇಲೆ ನೀರು ಹರಿಯುತ್ತಿದ್ದುದರಿಂದ ಯಾರು ಕೂಡ ಗ್ರಾಮದಿಂದ ತೆರಳಲು ಸಾಧ್ಯವಾಗದಂತಾಗಿದೆ. ಶಾಲಾ ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳು ಅಗತ್ಯ ವಸ್ತು ಖರೀದಿಗೆ ಹೋಗುವಂತವರು ಯಾವುದಕ್ಕೂ ಅವಕಾಶ ಇಲ್ಲದ ರೀತಿಯಲ್ಲಿ ನೀರು ಹರಿಯುತ್ತಿದ್ದು ಗ್ರಾಮದ ಜನರು ಹಳ್ಳದ ನೀರು ಕಂಡು ಭಯಭೀತರಾಗಿದ್ದಾರೆ.