ಕಾರವಾರ: ಬಿಣಗಾದಲ್ಲಿ ಮಟನ್ ಅಂಗಡಿ ತೆರವು ಮಾಡಿದ ನಗರಸಭೆ: ಮಟನ್ ತುಂಡು ಹಿಡಿದು ನರಸಭೆ ಕಚೇರಿ ಬಳಿ ಪ್ರತಿಭಟಿಸಿದ ಮಹಿಳೆ
ಬಿಣಗಾದ ನಗರಸಭೆ ಜಾಗದಲ್ಲಿ ಅಕ್ರಮವಾಗಿ ನಿರ್ಮಿಸಿದ್ದ ಮಟನ್ ಅಂಗಡಿಯನ್ನು ನಗರಸಭೆ ಸಿಬ್ಬಂದಿ ಬುಧವಾರ ತೆರವುಗೊಳಿಸಿದ್ದಾರೆ. ಇದರಿಂದ ಮಟನ್ ಅಂಗಡಿ ನಡೆಸುತ್ತಿದ್ದ ಮಹಿಳೆಯೊಬ್ಬಳು ಮಟನ್ ತುಂಬಿದ ಬಕೆಟ್ ಸಹಿತ ಬಂದು ನಗರಸಭೆ ಕಚೇರಿ ಮುಂದೆ ಬುಧವಾರ ಮಧ್ಯಾಹ್ನ 2.50ರ ಸುಮಾರು ಪ್ರಭಟನೆ ನಡೆಸಿದ ಘಟನೆ ನಡೆದಿದೆ. ನಗರದ ಬಿಣಗಾದಲ್ಲಿರುವ ಸಾರ್ವಜನಿಕ ಗ್ರಂಥಾಲಯಕ್ಕೆ ಹೊಂದಿಕೊಂಡಂತೆ ಅನಧಿಕೃತವಾಗಿ ಮಟನ್ ಅಂಗಡಿಯೊಂದು ಕಾರ್ಯನಿರ್ವಹಿಸುತ್ತಿತ್ತು. ಗ್ರಂಥಾಲಯಕ್ಕೆ ಬರುವ ಓದುಗರು, ವಿಶೇಷವಾಗಿ ಮಕ್ಕಳು, ಅಂಗಡಿಯಿಂದ ಬರುತ್ತಿದ್ದ ಮಾಂಸದ ವಾಸನೆ, ರಕ್ತದ ಕಲೆಗಳು ಮತ್ತು ಸ್ವಚ್ಛತೆಗಾಗಿ ಬಳಸುತ್ತಿದ್ದ ರಾಸಾಯನಿಕಗಳ ದುರ್ವಾಸನೆಯಿಂದ ತೀವ್ರ ಅಸಮಾಧಾನಗೊಂಡಿದ್ದರು.