ಇಳಕಲ್: ನಗರದಲ್ಲಿ ದೀಪಾವಳಿ ಹಬ್ಬದ ಖರೀದಿ ಜೋರು
Ilkal, Bagalkot | Oct 21, 2025 ಇಳಕಲ್ ನಗರದಲ್ಲಿ ದೀಪಾವಳಿ ಹಬ್ಬದ ಸಂಭ್ರಮ ಈಗಾಗಲೇ ಆರಂಭವಾಗಿದೆ. ನಗರದ ಮುಖ್ಯ ಮಾರ್ಕೆಟ್ ಪ್ರದೇಶಗಳಲ್ಲಿ ಜನಸಂದಣಿ ಹೆಚ್ಚಿದ್ದು, ಹೂವು, ಕಬ್ಬಿಣ ಗನ, ಬಾಳೆ ಕಾಯಿ, ಕುಂಬಳಕಾಯಿ, ನಿಂಬೆ, ಮತ್ತು ಅಲಂಕಾರ ಸಾಮಗ್ರಿಗಳ ಖರೀದಿಯಲ್ಲಿ ಜನರು ತೊಡಗಿದ್ದಾರೆ. ಚೆಂಡು ಹೂವು ಮಾರಾಟಗಾರರು ತಮ್ಮ ಹೂಗಳಿಂದ ಬೀದಿಗಳಿಗೆ ಬಣ್ಣ ತುಂಬಿದ್ದು, ಹೂವುಗಳ ಬೆಲೆ ಏರಿಕೆ ಕಂಡಿದೆ. ನಿಂಬೆ ಹಾಗೂ ಹೂಮಾಲೆಗಳಿಗೆ ಹೆಚ್ಚಾದ ಬೇಡಿಕೆಯು ವ್ಯಾಪಾರಿಗಳಿಗೆ ಉತ್ಸಾಹ ತುಂಬಿದೆ. ಸAಜೆ ವೇಳೆಗೆ ಬೆಳಕುಗಳಿಂದ ಮೆರುಗು ತುಂಬಿದ ಅಂಗಡಿಗಳು, ಸದ್ದು ಗದ್ದಲದಿಂದ ಕಂಗೊಳಿಸುತ್ತಿರುವ ಮಾರುಕಟ್ಟೆ ಹಬ್ಬದ ಸಂಭ್ರಮವನ್ನು ಹೆಚ್ಚಿಸಿದೆ.