ಚಾಮರಾಜನಗರ: ಚಾಮರಾಜನಗರ ಬಂದ್ ಮಿಶ್ರ ಪ್ರತಿಕ್ರಿಯೆ, ಎಂದಿನಂತೆ ಬಸ್ ಸಂಚಾರ
ಸುಪ್ರೀಂ ಕೋರ್ಟ್ ನ್ಯಾಯಾಧೀಶರಾದ ಗವಾಯಿ ಅವರ ಮೇಲೆ ವಕೀಲ ರಾಕೇಶ್ ಕಿಶೋರ್ ಶೂ ಎಸೆಯಲು ಯತ್ನಿಸಿದ ಪ್ರಕರಣ ಖಂಡಿಸಿ ಸಂವಿಧಾನ ಸಂರಕ್ಷಣಾ ಸಮಿತಿ ಸ್ವಯಂ ಪ್ರೇರಿತ ಬಂದ್ ಗೆ ಕರೆ ನೀಡಿದರು. ಶನಿವಾರ ಮಧ್ಯಾಹ್ನ ಒಂದು ಗಂಟೆಯ ವರೆಗೆ ಬಂದ್ ಗೆ ಜನರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿ ಅಂಗಡಿ ಮುಂಗಟ್ಟುಗಳು ಮುಚ್ಚಿದ್ದವು. ಕೆ.ಎಸ್.ಆರ್.ಟಿ.ಸಿ ಬಸ್ ಹಾಗೂ ಖಾಸಗಿ ಬಸ್ ಗಳು ಐಬಿ ರಸ್ತೆ, ರೇಷ್ಮೆ ಫ್ಯಾಕ್ಟರಿ ರಸ್ತೆ, ಎಲ್ಐಸಿ ಕಚೇರಿ ಹಾಗೂ ಹಳೆ ಆರ್ ಟಿಒ ಕಚೇರಿ ಬಳಿ ಬಸ್ ಸಂಚಾರ ಎಂದಿನಂತೆ ಓಡಾಟ ಮಾಡಿದವು. ಮಧ್ಯಾಹ್ನ ನಂತರ ಎಲ್ಲಾ ಅಂಗಡಿ ಮುಂಗಟ್ಟುಗಳು ತೆರೆದರು