ಡಿಜಿಪಿ ಅಲೋಕ್ ಕುಮಾರ್ ಸೂಚನೆ ಮೇರೆಗೆ ಬುಧವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ಬೆಂಗಳೂರು ಪರಪ್ಪನ ಅಗ್ರಹಾರ ಜೈಲಿನ ಮೇಲೆ ಸ್ಪೆಷಲ್ ಡ್ರೈವ್ ಮಾಡಿ ತಪಾಸಣೆ ಮಾಡಿದ ಅಧಿಕಾರಿಗಳು. ಜೈಲಿನಲ್ಲಿ 6 ಮೊಬೈಲ್ ಫೋನ್ ,4 ಚಾಕುಗಳು ಪತ್ತೆಯಾಗಿದೆ. ಅದರಂತೆ ಕಳೆದ36 ಗಂಟೆಯಲ್ಲಿ ಮೈಸೂರು ಜೈಲಿನಲ್ಲಿ 9 ಪೋನ್ ,11 ಸೀಮ್ ಪತ್ತೆಯಾಗಿದೆ. ಬೆಳಗಾವಿ ಜೈಲಿನಲ್ಲಿ 4 ಪೋನ್ ಹಾಗೂ 366 ಗ್ರಾಂ ಗಾಂಜಾ ಪತ್ತೆಯಾಗಿದೆ. ಇನ್ನು ಪರಪ್ಪನ ಜೈಲು ರೇಡ್ ಮಾಡಿದಾಗ ಗಾಂಜಾವನ್ನ ಆರೋಪಿಗಳು ಹೊರಗೆ ಎಸೆದಿದ್ದಾರೆ ಎನ್ನಲಾಗಿದೆ. ಇನ್ನು ಅಲೋಕ್ ಕುಮಾರ್ ಬಂದಿಖಾನೆ ಡಿಜಿಪಿ ಆಗುತ್ತಿದ್ದಂತೆ ಎಲ್ಲಾ ಜೈಲುಗಳಲ್ಲಿ ರೇಡ್ ತಪಾಸಣೆ ಮಾಡಿದ್ದಾರೆ.