ಕೊಳ್ಳೇಗಾಲ: ಉಗನಿಯದಲ್ಲಿ ಕಬ್ಬು ಕಟಾವು ವೇಳೆ ಭಾರಿ ಗಾತ್ರದ ಹೆಬ್ಬಾವು ಪತ್ತೆ:ಕಾರ್ಮಿಕರಲ್ಲಿ ಆತಂಕ
ಕೊಳ್ಳೇಗಾಲ ತಾಲೂಕಿನ ಉಗನೀಯ ಗ್ರಾಮದ ಜಮೀನೊಂದರಲ್ಲಿ ಕಬ್ಬು ಕಟಾವು ನಡೆಯುತ್ತಿದ್ದ ವೇಳೆ ಭಾರಿ ಗಾತ್ರದ ಹೆಬ್ಬಾವು ಪತ್ತೆಯಾದ ಘಟನೆಯೊಂದು ಕಾರ್ಮಿಕರಲ್ಲಿ ಆತಂಕ ಹುಟ್ಟಿಸಿದೆ. ಈ ಜಮೀನು ಉಗನೀಯ ಗ್ರಾಮದ ರಮೇಶ್ ಎಂಬ ರೈತನಿಗೆ ಸೇರಿದದ್ದಾಗಿದ್ದು, ಅವರ ಜಮೀನಿನಲ್ಲಿ ಕೂಲಿ ಕಾರ್ಮಿಕರು ಕಬ್ಬು ಕಟಾವಿನಲ್ಲಿ ತೊಡಗಿದ್ದ ಸಂದರ್ಭದಲ್ಲಿ ಹೆಬ್ಬಾವು ಕಾಣಿಸಿಕೊಂಡಿದೆ. ಹಾವನ್ನು ಕಂಡ ಕಾರ್ಮಿಕರು ತಕ್ಷಣ ಸ್ಥಳದಿಂದ ಓಡಿ ಪಾರಾಗಿದ್ದಾರೆ ಅಲ್ಲದೆ ಭಯಭೀತರಾದ ಕಾರ್ಮಿಕರು ಕೂಡಲೇ ಕೆಲಸ ನಿಲ್ಲಿಸಿದರು. ಘಟನೆಯ ಕುರಿತು ಸ್ಥಳೀಯರು ಮಾಹಿತಿ ನೀಡಿದ ಬಳಿಕ ಉರಗ ತಜ್ಞರನ್ನು ಸ್ಥಳಕ್ಕೆ ಆಗಮಿಸಿ ಹೆಬ್ಬಾವನ್ನು ಸುರಕ್ಷಿತವಾಗಿ ಹಿಡಿದು, ಅರಣ್ಯ ಇಲಾಖೆಯ ಸಹಾಯದಿಂದ ಸುರಕ್ಷಿತ ಸ್ಥಳಕ್ಕೆಬೀಡಲಾಯಿತು