ವಡಗೇರಾ: ಕಾಡಮಗೇರಾ.ಬಿ ಗ್ರಾಮದಲ್ಲಿ ಸಂಜೆ ಸುರಿದ ಭಾರಿ ಮಳೆಗೆ ಗ್ರಾಮದ ಮನೆಗಳಿಗೆ ನುಗ್ಗಿದ ನೀರು, ಗ್ರಾಮಸ್ಥರ ಪರದಾಟ
ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಕಾಡಂಗೇರಾ( B) ಗ್ರಾಮದಲ್ಲಿ ಗುರುವಾರ ಸಂಜೆ 4 ಗಂಟೆಗೆ ಸುರಿದ ಧಾರಾಕಾರ ಮಳೆಗೆ ಗ್ರಾಮದ ಬಡಾವಣೆಗಳಿಗೆ, ಗ್ರಾಮದ ಎಲ್ಲೆಡೆ ನೀರು ನುಗ್ಗಿವೆ. ಗ್ರಾಮದ ಮನೆಗಳಿಗೆ ನುಗ್ಗಿದ ಮಳೆ ನೀರು ಮನೆಯಲ್ಲಿರುವ ದಿನಸಿ ಸಾಮಗ್ರಿಗಳು ಸಂಪೂರ್ಣವಾಗಿ ನೀರಿನಲ್ಲಿ ಮುಳುಗಿಹೋಗಿವೆ ಜಿಲ್ಲೆಯಲ್ಲಿ ಮೂರು ದಿನಗಳಿಂದ ಬಾರಿ ಮಳೆಗೆ ಸಾರ್ವಜನಿಕರು ತತ್ತರಿಸುವ ಹೋಗುತ್ತಿದ್ದಾರೆ ಸದ್ಯ ಕಾಡಮಗೇರಾ .ಬಿ ಗ್ರಾಮವು ನದಿ ಯಂತಾಗಿದೆ. ಗ್ರಾಮದಲ್ಲಿ ಸಾರ್ವಜನಿಕರು ಮನೆಯಿಂದ ಹೊರಗೆ ಬರಲು ಹರಸಾಹಸ ಪಡುತ್ತಿದ್ದಾರೆ