ರೋಣ: ಯಾ.ಸ ಹಡಗಲಿಯಲ್ಲಿ ಭಾರಿ ದುರಂತ, ಹಳ್ಳದಲ್ಲಿ ಕೊಚ್ಚಿ ಹೊದ ಆಯುಸ್ಮಾನ್ ಆರೋಗ್ಯ ಸಿಬ್ಬಂದಿ
Ron, Gadag | Sep 16, 2025 ಹಳ್ಳದ ನೀರಿನಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿಗಳು ಕೊಚ್ಚಿಹೋದ ಘಟನೆ ಗದಗ ಜಿಲ್ಲೆ ರೋಣ ತಾಲೂಕಿನ ಯಾ.ಸ ಹಡಗಲಿ ಬಳಿ ಮಂಗಳವಾರ ನಡೆದಿದೆ. ಕೌಜಗೇರಿ ಆಯುಷ್ಮಾನ್ ಆರೋಗ್ಯ ಮಂದಿರ ಉಪ ಕೇಂದ್ರದ ಮೂವರು ಸಿಬ್ಬಂದಿಗಳು ನೀರುಪಾಲಾಗಿದ್ದಾರೆ. ಅವರಲ್ಲಿ ಇಬ್ಬರನ್ನು ರಕ್ಷಿಸಲಾಗಿದ್ದು, ಒಬ್ಬರಿಗಾಗಿ ಶೋಧ ಕಾರ್ಯ ಮುಂದುವರಿದಿದೆ.