ಮುಳಬಾಗಿಲು: ನಗರದಲ್ಲಿ ಬೆಸ್ಕಾಂ ಇಲಾಖೆ ವಿರುದ್ಧ ರೈತ ಸಂಘ ಪ್ರತಿಭಟನೆ
Mulbagal, Kolar | Nov 10, 2025 ಬೆಸ್ಕಾಂ ಇಲಾಖೆ ವಿರುದ್ಧ ರೈತ ಸಂಘ ಆರೋಪ ಮುಳಬಾಗಿಲು : ಬೆಸ್ಕಾಂ ಅಧಿಕಾರಿಗಳ ಹೆಸರಿನಲ್ಲಿ ಖಾಸಗಿ ವ್ಯಕ್ತಿಗಳು ವಿದ್ಯುತ್ ಕೋಟ್ಯಾಂತರ ಬಿಲ್ ವಸೂಲಿ ಮಾಡಿ ಗ್ರಾಹಕರನ್ನು ವಂಚಿಸಿರುವ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ನಿರ್ಲಕ್ಷೆ ಮಾಡಿರುವ ಅಧಿಕಾರಿಗಳನ್ನು ಮಂಪರು ಪರೀಕ್ಷೆಗೆ ಒಳಪಡಿಸಿ ಇಲಾಖೆಯಲ್ಲಿನ ಭ್ರಷ್ಟಚಾರವನ್ನು ಗಂಭೀರವಾಗಿ ಪರಿಗಣಿಸಬೇಕೆಂದು ರೈತ ಸಂಘದಿಂದ ಇಲಾಖೆ ಮುಂದೆ ಪ್ರತಿಭಟನೆಮಾಡಿ ಅಧಿಕಾರಿಗಳಿಗೆ ಮನವಿ ನೀಡಲಾಯಿತು. ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಫಾರೂಕ್ ಪಾಷಾ ಮಾತನಾಡಿ, ಮೂರು ನಾಲ್ಕು ವರ್ಷದಿಂದ ಬಿಲ್ ಪಾವತಿ ಮಾಡಿರುವ ಗ್ರಾಹಕರಿಗೆ ಬೆಸ್ಕಾಂ ಅಧಿಕಾರಿಗಳು ನೀಡಿರುವ ಬಿಲ್ಗಳನ್ನು ನೋಡಿ ಪ್ರಾಣವೇ ಹೋದಂತದಾಗಿದೆ