ಚಿಟಗುಪ್ಪ: ಮೀನಕೇರಾ ಗವಿ ವೀರಭದ್ರೇಶ್ವರ ಜಾತ್ರೆ ಹಿನ್ನೆಲೆಯಲ್ಲಿ ಜಂಗಿ ಕುಸ್ತಿ
ತಾಲೂಕಿನ ಮೀನಕೇರಾ ಗ್ರಾಮದ ಗವಿ ವೀರಭದ್ರೇಶ್ವರ ಜಾತ್ರೆ ಹಿನ್ನೆಲೆಯಲ್ಲಿ ಗುರುವಾರ ಮಧ್ಯಾಹ್ನ 3:30ಕ್ಕೆ ಜಂಗಿ ಕುಸ್ತಿ ನಡೆಯಿತು. ಸ್ಪರ್ಧೆಯಲ್ಲಿ ಕರ್ನಾಟಕ ಮಾತ್ರವಲ್ಲದೆ ತೆಲಂಗಾಣ ಮಹಾರಾಷ್ಟ್ರ ಸೇರಿದಂತೆ ದೇಶದ ವಿವಿಧ ರಾಜ್ಯಗಳ ಅನೇಕ ಜನ ಖ್ಯಾತ ಕುಸ್ತಿಪಟ್ಟುಗಳು ಜಂಗಿ ಕುಸ್ತಿಯಲ್ಲಿ ಭಾಗವಹಿಸಿ, ಸಾಹಸ ಪ್ರದರ್ಶಿಸಿದರು. ಈ ವೇಳೆ ಜಾತ್ರೆ ಉತ್ಸವ ಸಮಿತಿ ಸಮಸ್ತ ಪದಾಧಿಕಾರಿಗಳು ಹಾಜರಿದ್ದರು.