ಹುಲಸೂರ: ಮುಚಳಂಬನಲ್ಲಿ ಸತ್ಸಂಗ ಸಮ್ಮೇಳನಕ್ಕೆ ಚಾಲನೆ; ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಭಾಗಿ
Hulsoor, Bidar | Nov 29, 2025 ಹುಲಸೂರು ತಾಲೂಕಿನ ಮುಚಳಂಬ ಗ್ರಾಮದ ಶ್ರೀ ಶಿವಯೋಗಿ ಸಂಸ್ಥಾನ ಮಠದಲ್ಲಿ ಪರಮಪೂಜ್ಯ ಶ್ರೀ ನಾಗಭೂಷಣ ಶಿವಯೋಗಿಗಳ 56ನೇ ಪುಣ್ಯ ಸ್ಮರಣೋತ್ಸವ ಅಂಗವಾಗಿ ಆಯೋಜಿಸಲಾದ ಸತ್ಸಂಗ ಸಮ್ಮೇಳನದಲ್ಲಿ ಭಾಗವಹಿಸಿ ಪೂಜ್ಯ ಶ್ರೀ ನಾಗಭೂಷಣ ಶಿವಯೋಗಿಗಳ ಗದ್ದುಗೆಯ ದರ್ಶನ ಪಡೆದು ಮಾತನಾಡಿದೆನು. ಪವಾಡಪುರುಷರಾದ ಶ್ರೀ ನಾಗಭೂಷಣ ಶಿವಯೋಗಿಗಳ ತಪಸ್ಸು, ಸೇವಾಭಾವನೆ ಮತ್ತು ಸಮಾಜೋದ್ಧಾರ ಕಾರ್ಯಗಳು ಜನರಿಗೆ ಸದಾ ಪ್ರೇರಣಾದಾಯಕ. ಸಮಾಜದಲ್ಲಿ ಶಾಂತಿ, ಸಹಾನುಭೂತಿ ಮತ್ತು ಮನುಷ್ಯತ್ವ ಬೆಳೆಸುವ ಅವರ ಸಂದೇಶಗಳು ಇಂದಿಗೂ ಮಾರ್ಗದರ್ಶಕ. ಪರಮಪೂಜ್ಯ ಶ್ರೀ ಪ್ರಣವಾನಂದ ಮಹಾಸ್ವಾಮಿಗಳು ದಿವ್ಯ ಸಾನಿ