ಬಳ್ಳಾರಿ: ಗುಳ್ಯಂನ ಸೇತುವೆ ನಿರ್ಮಾಣಕ್ಕೆ ಶಾಸಕ ಗಣೇಶ್ ಹಾಗೂ ಸಂಸದ ಈ. ತುಕಾರಾಂ ಭರವಸೆ
ಆಂಧ್ರಪ್ರದೇಶದ ಗುಳ್ಯಂನ ಹಾಗೂ ಬಸರಕೋಡು ಗ್ರಾಮದ ಸಾವಿರಾರು ಜನರ ಬಹು ದಿನದ ಬೇಡಿಕೆಯಾದ ಶ್ರೀ ಶರಣ ಶ್ರೀ ಗಾದಿ ಲಿಂಗಪ್ಪ ತಾತನವರ ಗುಳ್ಯಂನ ಸೇತುವೆ ನಿರ್ಮಾಣ ಕಾರ್ಯಕ್ಕೆ ಶೀಘ್ರದಲ್ಲೇ ಚಾಲನೆ ದೊರೆಯಲಿದೆ. ಬಳ್ಳಾರಿ ಸಂಸದ ಈ. ತುಕಾರಾಂ ರವರು ಶಾಸಕ ಜೆ.ಎನ್. ಗಣೇಶ್ ಹಾಗೂ ಅಧಿಕಾರಿಗಳೊಂದಿಗೆ ಸ್ಥಳ ವೀಕ್ಷಣೆ ನಡೆಸಿ, ಸೇತುವೆ ನಿರ್ಮಾಣಕ್ಕೆ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಜನಸಾಮಾನ್ಯರಿಗೆ ಆಂಧ್ರಪ್ರದೇಶ ಹಾಗೂ ಕರ್ನಾಟಕದ ನಡುವೆ ಸಂಚಾರ ಸೌಲಭ್ಯ ಒದಗಿಸಲು ಈ ಸೇತುವೆ ಬಹು ಉಪಯುಕ್ತವಾಗಲಿದೆ ಎಂದು ಅ.16,ಗುರುವಾರ ಮಧ್ಯಾಹ್ನ 3ಗಂಟೆಗೆ ಅವರು ಹೇಳಿದರು.