ಹುಣಸಗಿ: ಮದಲಿಂಗನಾಳ ಗ್ರಾಮದ ಯುವಕ ಭೀಮಣ್ಣ ಹರಿಜನ ಕುಟುಂಬಕ್ಕೆ ಮಾದಿಗ ದಂಡೋರ ಸಂಘಟನೆಯ ಮುಖಂಡರು ಭೇಟಿ ನೀಡಿ ಸಾಂತ್ವನ
ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಮದಲಿಂಗನಾಳ ಗ್ರಾಮದ ಭೀಮಣ್ಣ ಹರಿಜನ ಎಂಬ ಯುವಕ ಶುಭವಾಗಿ ನಾರಾಯಣಪುರ ಗ್ರಾಮದ ಬಳಿಯ ಬೋರುಕಾ ವಿದ್ಯುತ್ ಸ್ಥಾವರದ ಬಳಿಯ ಕಾಲುವೆಯಲ್ಲಿ ಪತ್ತೆಯಾಗಿದ್ದ, ಯಾರೋ ಭೀಮಣ್ಣನನ್ನು ಕೊಲೆ ಮಾಡಲಾಗಿದೆ ಎನ್ನುವ ಆರೋಪವು ಕೇಳಿ ಬಂದ ಹಿನ್ನೆಲೆಯಲ್ಲಿ ಭಾನುವಾರ ಮಧ್ಯಾನ ಮದಲಿಂಗನಾಳ ಗ್ರಾಮದ ಭೀಮಣ್ಣನ ಕುಟುಂಬಕ್ಕೆ ಮಾದಿಗ ದಂಡೋರ ಮಾದಿಗ ಮೀಸಲಾತಿ ಹೋರಾಟ ಸಮಿತಿಯ ತಾಲೂಕ ಘಟಕದ ಪದಾಧಿಕಾರಿಗಳು ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ ಹಾಗೂ ಸರಕಾರ ಆ ಕುಟುಂಬಕ್ಕೆ ಪರಿಹಾರ ನೀಡಿ ಭೀಮಣ್ಣನ ಸಾವಿಗೆ ನ್ಯಾಯ ಒದಗಿಸಲು ಆಗ್ರಹಿಸಿದ್ದಾರೆ.