ರಾಜ್ಯ ಸರ್ಕಾರ ಶಿಕ್ಷಕರಿಗೆ, ಅಂಗನವಾಡಿ ಸಹಾಯಕರಿಗೆ ಬೋಧನೆ ಕೆಲಸದ ಜತೆಗೆ ನಾನಾ ಹೊಣೆಗಾರಿಕೆಗಳನ್ನು ನೀಡುತ್ತದೆ. ಬಿಸಿಯೂಟ ಯೋಜನೆ ಅನುಷ್ಠಾನ, ಚುನಾವಣೆ ಕರ್ತವ್ಯಗಳು, ಸರ್ಕಾರದ ಯೋಜನೆಗಳ ಅನುಷ್ಠಾನ ಜತೆಗೆ ಜಾತಿ ಸಮೀಕ್ಷೆ ಜನಗಣತಿ ಎಂದೆಲ್ಲ ಹತ್ತಾರು ಕೆಲಸಗಳಿಗೆ ಶಿಕ್ಷಕರನ್ನೇ ಬಳಸಿಕೊಳ್ಳಲಾಗುತ್ತಿದೆ. ಇತ್ತೀಚೆಗೆ ನಡೆದ ಇಂಥ ಕೆಲಸಗಳಿಗೆ ನಿಯೋಜನೆಗೊಂಡ ಶಿಕ್ಷಕರು ಕರ್ತವ್ಯದಲ್ಲಿ ಕೊಂಚ ನಿರ್ಲಕ್ಷ ವಹಿಸಿದರೂ ಮೇಲಾಧಿಕಾರಿಗಳು ನೋಟಿಸ್ ನೀಡಿದ, ಅಮಾನತುಗೊಳಿಸಿದ. ಶಿಕ್ಷೆ ವಿಧಿಸಿದ ನಿದರ್ಶನಗಳಿವೆ. ಆದರೆ ಈ ಒಂದು ಜವಾಬ್ದಾರಿ ಮುಗಿಸಿದ ಸಿಬ್ಬಂದಿಗಳಿಗೆ ಮೂರು ತಿಂಗಳು ಕಳೆಯುತ್ತಾ ಬಂದಿದ್ದತೂ ಈ ವರೆಗೆ ಅವರಿಗೆ ಗೌರವ ಧನ ನೀಡಿಲ್ಲ