ಕಲಬುರಗಿ: ವೋಟ್ ಚೋರಿ, ಎಸ್ಐಟಿ ದಾಳಿ ಬಗ್ಗೆ ನಾ ಮಾತನಾಡಲಾರೇ: ನಗರದಲ್ಲಿ ಆಳಂದ ಶಾಸಕ ಬಿಆರ್ ಪಾಟೀಲ್
ಕಲಬುರಗಿ : ಆಳಂದ ವಿಧಾನಸಭೆ ಕ್ಷೇತ್ರದಲ್ಲಿ ವೋಟ್ ಚೋರಿ ವಿಚಾರದಲ್ಲಿ ಮಾಜಿ ಶಾಸಕ ಸುಭಾಷ್ ಗುತ್ತೇದಾರ್ ನಿವಾಸದ ಮೇಲೆ ಎಸ್ಐಟಿ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ನಾನು ಎಸ್ಐಟಿ ದಾಳಿ ಬಗ್ಗೆ ಮಾತನಾಡಲಾರೇ ಅಂತಾ ಶಾಸಕ ಬಿಆರ್ ಪಾಟೀಲ್ ಹೇಳಿದ್ದಾರೆ.. ಅ18 ರಂದು ಬೆಳಗ್ಗೆ 10 ಗಂಟೆಗೆ ಕಲಬುರಗಿಯಲ್ಲಿ ಮಾತನಾಡಿದ ಅವರು, ಎಸ್ಐಟಿ ತನಿಖಾ ಹಂತದಲ್ಲಿ ನಾ ಏನು ಹೇಳಲಾರೇ.. ಇದು ಆಳಂದಕ್ಕೆ ಮಾತ್ರ ಸಿಮೀತವಾಗಿಲ್ಲ.. ದೇಶಾದ್ಯಂತ ಈ ರೀತಿ ಮಾಡಲಾಗಿದೆ.. ಈ ವಿಚಾರಕ್ಕೆ ನನಗೆ ರಾಹುಲ್ ಗಾಂಧಿ ಮೂರು ಬಾರಿ ಕರೆ ಮಾಡಿದ್ರು ಅಂತಾ ಶಾಸಕ ಬಿಆರ್ ಪಾಟೀಲ್ ಹೇಳಿದ್ದಾರೆ