ಹುಮ್ನಾಬಾದ್: ಓತಗಿಯಲ್ಲಿ ಶಾಸಕ ಡಾ. ಸಿದ್ದು ಪಾಟೀಲ್ ಅವರಿಂದ ಹನುಮಾನ್ ದೇವಸ್ಥಾನ ನೂತನ ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ ಚಾಲನೆ
Homnabad, Bidar | Oct 21, 2025 ತಾಲೂಕಿನ ಓತಗಿ ಗ್ರಾಮದಲ್ಲಿ ನಿರ್ಮಿಸುತ್ತಿರುವ ಹನುಮಾನ ದೇವಸ್ಥಾನದ ನೂತನ ಸಮುದಾಯ ಭವನ ಕಾಮಗಾರಿಗೆ ಕ್ಷೇತ್ರದ ಶಾಸಕ ಡಾ.ಸಿದ್ದು ಪಾಟೀಲ್ ಅವರು ಮಂಗಳವಾರ ಮಧ್ಯಾಹ್ನ 2:30ಕ್ಕೆ ಪೂಜೆ ನೆರವೇರಿಸಿ ಚಾಲನೆ ನೀಡಿದರು. ಪ್ರಮುಖರಾದ ಶಿವಾಜಿ ಪಾಟೀಲ್ ದಸ್ತಗಿರ್ ಪಟೇಲ್, ಇಸಾಮುದ್ದೀನ್ ಮೀರಸಾಬ್, ಓಂ ಪಾಟೀಲ್, ಗೋವಿಂದ್, ಶಿವರಾಜ ಸ್ವಾಮಿ, ಶ್ರೀನಿವಾಸ್ ರೆಡ್ಡಿ, ಶ್ರೀನಿವಾಸ್ ಲಗಡೆ ಸೇರಿದಂತೆ ಇನ್ನೂ ಅನೇಕರು ಹಾಜರಿದ್ದರು.