ಚಾಮರಾಜನಗರ: ಬಿಸಲವಾಡಿಯಲ್ಲಿ ಶ್ರೀಲಕ್ಷ್ಮೀದೇವಿ ಅಮ್ಮನವರಿಗೆ 6 ಕೆಜಿ ಬೆಳ್ಳಿ ಕವಚ ಸಮರ್ಪಣೆ
ಚಾಮರಾಜನಗರ ತಾಲೂಕಿನ ಬಿಲಸವಾಡಿ ಗ್ರಾಮದ ಶ್ರೀಲಕ್ಷ್ಮೀದೇವಿ ಅಮ್ಮನವರ ದೇವಸ್ಥಾನದಲ್ಲಿ ಗಾಳಿಪುರ ಮಹಾದೇವು ಹಾಗೂ ಗ್ರಾಮಸ್ಥರು ನೂತನ ಬೆಳ್ಳಿಕವಚ ಸಮರ್ಪಣೆ ಮಾಡಿದರು. ಶ್ರೀ ಅಮ್ಮನವರಿಗೆ ಗ್ರಾಮಸ್ಥರು ಒಂದೂವರೆ ಕೆಜಿ ಹಾಗೂ ಮಹಾದೇವು ಎಂಬ ಭಕ್ತರು 4.50 ಕೆಜಿ. ಬೆಳ್ಳಿ ಸೇರಿದಂತೆ ಒಟ್ಟು 6 ಕೆಜಿ ಬೆಳ್ಳಿಯಲ್ಲಿ ನೂತನ ಬೆಳ್ಳಿ ಕವಚ ಸಮರ್ಪಿಸಲಾಯಿತು. ಬೆಳ್ಳಿ ಕವಚ ತಂದ ವೇಳೆ ಪೂರ್ಣಕುಂಭದಿಂದ ಸ್ವಾಗತಿಸಿ ವಿಜೃಂಭಣೆಯಿಂದ ಸಮರ್ಪಿಸಲಾಯಿತು.