ಮಾನ್ವಿ: ಪಟ್ಟಣದಲ್ಲಿ ಬೀದಿ ನಾಯಿಗಳ ಹಾವಳಿಗೆ ಆತಂಕಗೊಂಡ ಸಾರ್ವಜನಿಕರು
Manvi, Raichur | Sep 26, 2025 ರಾಯಚೂರು ಜಿಲ್ಲೆಯ ಮಾನ್ವಿ ಪಟ್ಟಣದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು ಸಾರ್ವಜನಿಕರು ಆತಂಕಕ್ಕೆ ಒಳಗಾಗಿದ್ದಾರೆ. ಶುಕ್ರವಾರ ಮಧ್ಯಾಹ್ನ ಅನೇಕ ಜನರು ಬೀದಿ ನಾಯಿಗಳ ಕುರಿತು ಅಸಮಾಧಾನ ವ್ಯಕ್ತಪಡಿಸಿ, ಪುರಸಭೆ ಅಧಿಕಾರಿಗಳು ಕೂಡಲೇ ಬೀದಿನಾಯಿಗಳ ಸ್ಥಳಾಂತರಿಸಬೇಕು, ಹಿಂಡು ಹಿಂಡಾಗಿ ಬೀದಿನಾಯಿಗಳು ಓಡಾಡುವುದರಿಂದ ಜನರು ಹೊರಗೆ ಹೋಗಲು ಭಯಪಡುವಂತಾಗುತ್ತಿದೆ. ಈ ಹಿಂದೆ ಶಾಲಾ ಮಕ್ಕಳು ವಯೋವೃದ್ಧರ ಮೇಲೆ ದಾಳಿ ಮಾಡಿರುವ ಘಟನೆಗಳು ನಡೆದಿದ್ದು ಮತ್ತೆ ಅಂತಹ ಅನಾಹುತ ಸಂಭವಿಸದಂತೆ ಪುರಸಭೆ ಮುಂಜಾಗ್ರತೆ ವಹಿಸಲು ಕೂಡಲೇ ಎಲ್ಲ ಬೀದಿ ನಾಯಿಗಳನ್ನು ಸ್ಥಳಾಂತರಿಸಲು ಒತ್ತಾಯಿಸಿದ್ದಾರೆ.