ಬಂಗಾರಪೇಟೆ: ಹುಲಿಬೆಲೆಗೆ ಯರ್ಗೋಳ್ ಡ್ಯಾಂ ನೀರು:ವಾರ್ಷಿಕ ಮಹಾಸಭೆಯಲ್ಲಿ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಭರವಸೆ
ಜಿಲ್ಲೆಯ ರೈತರ ಜೀವ ನಾಡಿ ಹೈನುಗಾರಿಕೆಯಾಗಿದೆ. ಪಿತಾಮಹ ಎಂ.ವಿಕೃಷ್ಣಪ್ಪ ನವರು ಡೆನ್ಮಾರ್ಕ್ನಿಂದ ಸೀಮೆಹಸುಗಳನ್ನು ತಂದು ರೈತರ ಬಧುಕನ್ನು ಹಸನು ಮಾಡಿದ್ದಾರೆ ಎಂದು ಶಾಸಕ ಎಸ್.ಎನ್.ನಾರಾಯಣಸ್ವಾಮಿ ಹೇಳಿದರು.ತಾಲ್ಲೂಕಿನ ಹುಲಿಬೆಲೆ, ಅಬ್ಬಿಗಿರಿಹೊಸಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ ಮಹಾಸಭೆಯನ್ನು ಭಾನುವಾರ ಉದ್ಘಾಟಿಸಿ ಮಾತನಾಡಿದ ಅವರು ಹುಲಿಬೆಲೆ ಡೇರಿಗೆ 35 ವರ್ಷಗಳ ಇತಿಹಾಸ ಇದೆ, 7.55 ಲಕ್ಷರೂಗಳು ನಿಮ್ಮಲಾಭ ಬಂದಿದೆ. 3.60 ಲಕ್ಷರೂಗಳ ಭೋನಸ್ ನೀಡಲಾಗು ತಿದೆ, ಟೇಕಲ್ ರಸ್ತೆಯಿಂದ ಹುಲಿಬೆಲೆ ರಸ್ತೆಗೆ 6 ಕೋಟಿರೂಗಳು ಮಂಜೂರಾಗಿದೆ, ರಸ್ತೆಯನ್ನು ಆಗಲೀಕರಣ ಮಾಡಿ ದೊಡ್ಡ ರಸ್ತೆ ಮಾಡಲಾಗು ವುದು, ಹುಲಿಬೆಲೆ ಗ್ರಾಮಕ್ಕೆ ನೀರಿನ ಅಭಾವ ಇದ್ದು, ಯರ್ಗೊಳ್ ಡ್ಯಾಂ ನೀರನ್ನುಒದಗಿಸುತ್ತೇನೆ ಎಂದ್ರು