ಮಸ್ಕಿ: ಮಸ್ಕಿ ಪಟ್ಟಣದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯ ಭಾವಚಿತ್ರ ಅದ್ದೂರಿ ಬರವಣಿಗೆ
Maski, Raichur | Apr 5, 2024 ಮಸ್ಕಿ: ಪಟ್ಟಣದಲ್ಲಿ ಜಗದ್ಗುರು ರೇಣುಕಾಚಾರ್ಯರ ಜಯಂತಿ ನಿಮಿತ್ತ ವೀರಶೈವ ಲಿಂಗಾಯತ ಸಮಾಜದಿಂದ ಮಸ್ಕಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ರೇಣುಕಾಚಾರ್ಯರ ಭಾವಚಿತ್ರದ ಮೆರವಣಿಗೆ ಅದ್ದೂರಿಯಾಗಿ ನಡೆಯಿತು..ಮಸ್ಕಿ ಪಟ್ಟಣದ ಗಚ್ಚಿನಮಠದಲ್ಲಿ ರೇಣುಕಾಚಾರ್ಯರರ ಮೂರ್ತಿಗೆ ಪೂಜೆ ಸಲ್ಲಿಸಿದ ನಂತರ ಮಠದ ಮೇಲೆ ದ್ವಜಾರೋಹಣ ನೆರವೇರಿಸಿದ ಮಠದ ಪೀಠಾಧ್ಯಕ್ಷ ವರರುದ್ರಮುನಿ ಸ್ವಾಮೀಜಿ ಅವರು ರೇಣುಕಾಚಾರ್ಯರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡುವ ಮೂಲಕ ಮೆರವಣಿಗೆಗೆ ಶುಕ್ರವಾರ ಚಾಲನೆ ನೀಡಿದರು.