ತುಮಕೂರು: ನಗರದಲ್ಲಿ ಸೆ. 17 ರಂದು ಪ್ರಧಾನಿ ಮೋದಿ ಹುಟ್ಟು ಹಬ್ಬ ಹಿನ್ನಲೆ, ಬೃಹತ್ ಅರೋಗ್ಯ ತಪಾಸಣೆ ಶಿಬಿರ : ತುಮಕೂರಿನಲ್ಲಿ ಬಿಜೆಪಿ ರಾಜ್ಯ ಮುಖಂಡ
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ 75 ನೇ ವರ್ಷದ ಜನ್ಮದಿನದ ಸಂಭ್ರಮ ಹಿನ್ನಲೆ ಬೃಹತ್ ಉಚಿತ ಅರೋಗ್ಯ ತಪಾಸಣೆ ಹಾಗೂ ರಕ್ತದಾನ ಶಿಬಿರ ಸೇರಿದಂತೆ ವಿವಿಧ ಜನಪರ ಕಾರ್ಯಕ್ರಮಗಳು ಸೆ. 17 ರಂದು ತುಮಕೂರು ನಗರದಲ್ಲಿ ನಡೆಯಲಿದೆ. ಈ ಬಗ್ಗೆ ಬಿಜೆಪಿ ರಾಜ್ಯ ಕಾರ್ಯಕಾರಣಿ ಮಂಡಳಿ ಸದಸ್ಯ ಎಸ್. ಪಿ. ಚಿದಾನಂದ ಅವರು ಮಾಹಿತಿ ನೀಡಿದರು. ಅವರು ತುಮಕೂರು ನಗರದ ಉಪ್ಪಾರಹಳ್ಳಿಯ ತಮ್ಮ ಕಚೇರಿಯಲ್ಲಿ ಮಾಧ್ಯಮಗೋಷ್ಠಿ ಉದ್ದೇಶಿಸಿ ಸೋಮವಾರ ಬೆಳಿಗ್ಗೆ 11 ರ ಸಮಯದಲ್ಲಿ ಮಾತನಾಡಿದರು.ಅಂದು ಬೆಳಿಗ್ಗೆ 8.30 ಗಂಟೆಗೆ ಕ್ಯಾತ್ಸಂದ್ರ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಜಿಲ್ಲೆಯ 40 ಸಾವಿರ ಮಕ್ಕಳಿಗೆ 2 ಲಕ್ಷ ಪುಸ್ತಕ ವಿತರಣೆ ಕಾರ್ಯಕ್ರಮಕ್ಕೆ ಕೇಂದ್ರ ಸಚಿವ ಸೋಮಣ್ಣ ಚಾಲನೆ ನೀಡಲಿದ್ದಾರೆ ಎಂದರು.