ರಾಯಚೂರು: ಡೊಂಗ ರಾಂಪುರ ಗ್ರಾಮದಲ್ಲಿ ನಾಯಿಯನ್ನ ತಿಂದು ಹಾಕಿದ ಚಿರತೆ; ಎಷ್ಟು ಹಿಡಿದರೂ ಮತ್ತೆ ಮತ್ತೆ ಕಾಣಿಸಿಕೊಳ್ಳುವ ಚಿರತೆ
ತಾಲೂಕಿನ ಡೊಂಗರಾಂಪುರ, ಮಾಮಡದೊಡ್ಡಿ ಮಧ್ಯೆ ಇರುವ ಹೊಲದಲ್ಲಿ ರವಿವಾರ ನಾಯಿ ಮೇಲೆ ಚಿರತೆ ದಾಳಿ ಮಾಡಿ ಕೊಂದು ಹಾಕಿದ ಘಟನೆ ನಡೆದಿದೆ. ಡೊಂಗರಾಂಪುರ ಗ್ರಾಮದಲ್ಲಿ ಕೆಲ ದಿನಗಳ ಹಿಂದಷ್ಟೇ ಚಿರತೆಯೊಂದು ಪರಮೇಶ್ವರ ಬೆಟ್ಟದ ಮೇಲೆ ಚಿರತೆ ನವಿಲು, ನಾಯಿಗಳನ್ನು ತಿಂದು ಹಾಕಿತ್ತು. ತದನಂತರ ಆಕಳು ಕರುವನ್ನ ತಿಂದು ಹಾಕಿತ್ತು. ಬಳಿಕ ಅರಣ್ಯ ಇಲಾಖೆಯ ನಿರಂತರ ಕಾರ್ಯಾಚರಣೆ ನಡೆಸಿ ಚಿರತೆಯನ್ನು ಬೋನಿಗೆ ಬೀಳಿಸಿದ್ದರು. ಇದೀಗ ಮತ್ತೆ ಚಿರತೆ ದಾಳಿ ನಡೆಸಿ ನಾಯಿಯನ್ನು ಕೊಂದು ಹಾಕಿ ಆತಂಕ ಮೂಡಿಸಿದೆ.