ಚಿತ್ರದುರ್ಗ: ಚಿತ್ರದುರ್ಗದಲ್ಲಿ ರೇಣುಕಾಸ್ವಾಮಿ ಸಮಾಧಿ ತೆರವು ಮಾಡಲಾಗಿದೆ
ನಟ ಚಾಲೆಂಜಿಂಗ್ ದರ್ಶನ್ ಗ್ಯಾಂಗ್ ನಿಂದ ಹತ್ಯೆಯಾಗಿದ್ದ ಚಿತ್ರದುರ್ಗದ ರೇಣುಕಾಸ್ವಾಮಿ ಸಮಾಧಿಯನ್ನೂ ತೆರವುಗೊಳಿಸುವ ಕಾರ್ಯ ಮಾಡಿದ್ದಾರೆ. ಜಟ್ ಪಟ್ ನಗರದ ಬಳಿಯ ಸ್ಮಶಾನದಲ್ಲಿ ರೇಣುಕಾಸ್ವಾಮಿ ಸಮಾಧಿಯನ್ನ ತೆರವು ಮಾಡಲಾಗಿದೆ.ರೇಣುಕಾಸ್ವಾಮಿ ಮೃತಪಟ್ಟು ಒಂದು ವರ್ಷದ ತರುವಾಯ ಸಮಾಧಿ ನಿರ್ಮಿಸಲಾಗಿತ್ತು. ಜೋಗಿಮಟ್ಟಿ ರಸ್ತೆಯ ಜಟ್ ಪಟ್ ನಗರ ಬಳಿಯ ವೀರಶೈವ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ಮಾಡಲಾಗಿತ್ತು. ವೀರಶೈವ ಸಂಘದಿಂದ ಸ್ಮಶಾನ ಅಭಿವೃದ್ಧಿ ಕಾರ್ಯಕ್ಕೆ ಮುಂದಾಗಿದ್ದು, ಜೆಸಿಬಿಯಿಂದ ಸ್ವಚ್ಛತೆ ಮಾಡುವಾಗ ರೇಣುಕಾಸ್ವಾಮಿ ಸಮಾಧಿ ಜೊತೆಗೆ ಹಲವು ಸಮಾಧಿಗಳು ತೆರವುಗೊಳಿಸಲಾಗಿದೆ.