ಧಾರವಾಡ: ಜಿಲ್ಲೆಯಲ್ಲಿ ಸತತ ಮಳೆ: ಗೋವಿನ ಜೋಳದ ಬೆಳೆ ಮೊಳಕೆ: ಜಿಲ್ಲೆಯ ಅಳ್ನಾವರ, ಕಲಘಟಗಿ, ಧಾರವಾಡ ತಾಲೂಕಿನ ರೈತರಿಗೆ ಸಂಕಷ್ಟ
ಧಾರವಾಡ ಜಿಲ್ಲೆಯಲ್ಲಿ ಸತತ ಸುರಿದ ಮಳೆಯಿಂದ ರೈತರು ಸಮೃದ್ಧವಾಗಿ ಬೆಳೆದ ಗೋವಿನ ಜೋಳದ ಬೆಳೆ ಹಾನಿಯಾಗಿದ್ದು, ಕಟ್ಟಾವು ಹಂತದಲ್ಲಿ ಬೆಳೆ ಹಾನಿಯಾಗಿ ರೈತನಿಗೆ ಕೈಗೆ ಬಂದ ತುತ್ತು ಬಾಯಿಗೆ ಬಂದಿಲ್ಲ ಎಂಬತಾಗಿದೆ. ಧಾರವಾಡ ಜಿಲ್ಲೆಯ ಕಲಘಟಗಿ, ಅಳ್ನಾವರ, ಧಾರವಾಡ ತಾಲೂಕಿನಲ್ಲಿ ಗೋವಿನ ಜೋಳವನ್ನು ಅಧಿಕವಾಗಿ ಬಿತ್ತನೆ ಮಾಡಿದ ರೈತರು ಬೆಳೆ ಹಾನಿಯಿಂದ ಕಂಗಾಲಾಗಿದ್ದಾರೆ. ಬುಧವಾರ ಮಧ್ಯಾಹ್ನ 3 ಗಂಟೆಗೆ ಗೋವಿನ ಜೋಳದ ತೆನೆಗಳು ತೊಯ್ದು ಮೋಳಕೆ ಬಂದಿದೆ.