ಹುಮ್ನಾಬಾದ್: ನಗರದ ರೈಲ್ವೆ ನಿಲ್ದಾಣದಲ್ಲಿ ಗಂಭೀರ ಗಾಯಗೊಂಡು ವಿವಾಹಿತ ವ್ಯಕ್ತಿ ಸಾವು, ಸ್ಥಳಕ್ಕೆ ಪೊಲೀಸರ ಭೇಟಿ
Homnabad, Bidar | Oct 23, 2025 ರೈಲ್ವೆ ನಿಲ್ದಾಣದಲ್ಲಿ ವ್ಯಕ್ತಿ ವ್ಯಕ್ತಿ ಒಬ್ಬರು ಗಂಭೀರ ಗಾಯಗೊಂಡು ಮೃತಪಟ್ಟ ಘಟನೆ ನಗರದ ರೈಲು ನಿಲ್ದಾಣದಲ್ಲಿ ಗುರುವಾರ ಮದ್ಯಾಹ್ನ 1:30ಕ್ಕೆ ಪತ್ತೆಯಾಗಿದೆ. ಮೃತ ವ್ಯಕ್ತಿಯನ್ನು ನಗರದ ಗಾಂಧಿನಗರದ ನಿವಾಸಿ ಆಕಾಶ್ ರಮೇಶ್ ದೊಡ್ಮನಿ (30) ಎಂದು ಗುರುತಿಸಲಾಗಿದೆ. ಘಟನೆ ಹಿನ್ನೆಲೆಯಲ್ಲಿ ಡಿವೈಎಸ್ಪಿ ಮಡೋಳಪ್ಪ, ಪಿಎಸ್ಐ ಸುರೇಶ್ ಕುಮಾರ ಚೌಹಾಣ್ ಹಾಗೂ ರೈಲ್ವೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಘಟನೆಗೆ ಸ್ಪಷ್ಟ ಕಾರಣ ತಿಳಿದುಬಂದಿಲ್ಲ.